ಬೆಂಗಳೂರು: ನಗರದಲ್ಲಿ ಕ್ಯಾಬ್ ಚಾಲಕನೋರ್ವ ಲೇಡಿ ಜೊತೆ ಕಿರಿಕ್ ಮಾಡಿರುವ ಘಟನೆ ನಡೆದಿದೆ.
ಕಾರು ಡ್ರೈವಿಂಗ್ ಮಾಡುತ್ತಿದ್ದ ಲೇಡಿಗೆ ಕ್ಯಾಬ್ ಚಾಲಕ ಅಶ್ಲೀಲವಾಗಿ ನಿಂದಿಸಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯೋರ್ವರು ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕಾರನ್ನು ಲೆಫ್ಟ್ ಗೆ ಟರ್ನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾರಿನ ಬಳಿ ಬಂದ ಯುವಕ, ಅಶ್ಲೀಲವಾಗಿ ನಿಂದಿಸಿದ್ದಾನೆ.
ಕಾರಿನ ವಿಂಡೋ ಕೆಳಗೆ ಇಳಿಸಿ ಸೆಲ್ಫಿ ತೆಗೆದುಕೊಳ್ಳುತ್ತೇನೆಂದು ಕಿರಿಕ್ ಮಾಡಿದ್ದಾನೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


















