ಬೆಂಗಳೂರು: ಬೆಂಗಳೂರು ಗ್ರಾಮಾಂತರ ತಾಲೂಕಿನ ನೆಲಮಂಗಲ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ನೂರಾರು ಕುಟುಂಬಗಳಗೆ ಆಸರೆಯಾಗಿದ್ದ ಚಂದ್ರಮ್ ಅವರ ಕುಟುಂಬ ಒಟ್ಟಾಗಿ ಇಹಲೋಕ ತ್ಯಜಿಸಿದ್ದಕ್ಕೆ ಹಲವರು ಕಂಬನಿ ಮಿಡಿದಿದ್ದರು. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಚಂದ್ರಮ್ ಅವರ ಕೊನೆಯೆ ವಿಡಿಯೋ ಸೆರೆಯಾಗಿದೆ.
ಅಪಘಾತಕ್ಕೆ ಬಲಿ ಆಗಿದ್ದ ಆರು ಜನರ ಶವಗಳು ಭಾನುವಾರ ಬೆಳಗ್ಗೆ ಹುಟ್ಟೂರು ತಲುಪುತ್ತಿದ್ದಂತೆ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈಗ ಉದ್ಯಮಿಯ ಕೊನೆ ಪಯಣದ ದೃಶ್ಯ ಟೋಲ್ ನಲ್ಲಿನ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕ್ರಿಸ್ ಮಸ್ ರಜೆ, ಅಪ್ಪನ ಆರೋಗ್ಯ ವಿಚಾರಣೆ ಎಂದು ಸಾಫ್ಟ್ ವೇರ್ ಉದ್ಯಮಿ ಊರಿನತ್ತ ಪ್ರಯಾಣ ಬೆಳೆಸಿದ್ದರು.
ಇಡೀ ಕುಟುಂಬ ಕಾರಿನಲ್ಲಿ ಹೊರಟಿತ್ತು. ಬೆಳಗ್ಗೆ 11ಕ್ಕೆ ನೆಲಮಂಗಲದ ಬಳಿ ಕಾರು ಬಂದಿತ್ತು. ಆಗಲೇ ಕಂಟೇನರ್ ರೂಪದಲ್ಲಿ ಬಂದ ಜವರಾಯ ಕಾರಿನ ಮೇಲೆ ಉರುಳಿ ಬಿದ್ದಿದ್ದಾನೆ. 51 ಟನ್ ತೂಕದ ಕಂಟೇನರ್ ಉರುಳುತ್ತಿದ್ದಂತೆ ಚಂದ್ರಮ್ ಸೇರಿದಂತೆ ಎಲ್ಲ 6 ಜನರು ಕಾರಿನಲ್ಲಿಯೇ ಸಾವನ್ನಪ್ಪಿದ್ದಾರೆ. ಚಂದ್ರಮ್ ಪ್ರಯಾಣಿಸುತ್ತಿದ್ದ ಕೊನೆಯ ದೃಶ್ಯ ಟೋಲ್ ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.