ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಹೊಸ ದಾಖಲೆ ಬರೆದಿದ್ದಾರೆ.
ಮೊದಲ ಟೆಸ್ಟ್ ನಲ್ಲಿ 8 ವಿಕೆಟ್ ಉರುಳಿಸಿದ್ದ ಬುಮ್ರಾ, ದ್ವಿತೀಯ ಟೆಸ್ಟ್ ನಲ್ಲಿ 4 ವಿಕೆಟ್ ಉರುಳಿಸಿದ್ದರು. ಮೂರನೇ ಪಂದ್ಯದಲ್ಲಿ 9 ವಿಕೆಟ್ ಪಡೆದಿದ್ದರು. ಈಗ ನಾಲ್ಕನೇ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಒಟ್ಟು 4 ಪಂದ್ಯಗಳಿಂದ ಒಟ್ಟು 29 ವಿಕೆಟ್ ಪಡೆದಿದ್ದಾರೆ.
ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಆವೃತ್ತಿಯೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ನಿರ್ಮಿಸಿದ್ದಾರೆ. ಈ ದಾಖಲೆ ಆಸೀಸ್ ವೇಗಿ ಬೆನ್ ಹಿಲ್ಫೆನ್ಹಾಸ್ ಹೆಸರಿನಲ್ಲಿತ್ತು.
2011-12 ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 4 ಪಂದ್ಯಗಳಲ್ಲಿ 1008 ಎಸೆತಗಳನ್ನು ಎಸೆದು ಬೆನ್ ಹಿಲ್ಫೆನ್ಹಾಸ್ ಒಟ್ಟು 27 ವಿಕೆಟ್ ಕಬಳಿಸಿದ್ದರು. ಈಗ 29 ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಸರಣಿಯಲ್ಲಿ 4 ಪಂದ್ಯಗಳಲ್ಲಿ 778* ಎಸೆತಗಳನ್ನು ಎಸೆದಿರುವ ಬುಮ್ರಾ 29* ವಿಕೆಟ್ ಕಬಳಿಸಿದ್ದಾರೆ.