ಆಸ್ಟ್ರೇಲಿಯಾ(Australia) ಪ್ರವಾಸದ ಬಾರ್ಡರ್ ಗವಾಸ್ಕರ್ ಟ್ರೋಫಿ(Border Gavaskar Trophy)ಟೆಸ್ಟ್ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಒಟ್ಟು 32 ವಿಕೆಟ್ ಕಬಳಿಸಿದ್ದ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ತಿಂಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯದ ಅನ್ನಾಬೆಲ್(Annabel) ಸದರ್ಲೆಂಡ್ ಮಹಿಳಾ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಮೂರು ಟೆಸ್ಟ್ ಪಂದ್ಯ ಆಡಿದ್ದ ಬುಮ್ರಾ 22 ವಿಕೆಟ್ ಉರುಳಿಸಿದ್ದರು. ಬುಮ್ರಾ ಜತೆ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಡೇನ್ ಪ್ಯಾಟರ್ಸನ್(Dane Patterson) ಪ್ರಶಸ್ತಿ ರೇಸ್‌ನಲ್ಲಿ ಇದ್ರು
ಅನ್ನಾಬೆಲ್ ಸದರ್ಲೆಂಡ್ ಭಾರತದೆದುರಿನ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. 3ನೇ ಏಕದಿನದಲ್ಲಿ ಸೆಂಚುರಿ ಬಾರಿಸಿ ಮಿಂಚಿದ್ದರು (110). ಬಳಿಕ ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲೂ ಅಜೇಯ 105 ರನ್ ಹೊಡೆಯುವ ಮೂಲಕ ಸತತ 2 ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು.