ಜೈಪುರ: ಕೊನೆಯ ಕ್ಷ ಣದವರೆಗೂ ಕುತೂಹಲ ಹಿಡಿದಿಟ್ಟ ರೋಚಕ ಪಂದ್ಯದಲ್ಲಿತೆಲುಗು ಟೈಟನ್ಸ್ ತಂಡವನ್ನು ಹೆಡೆಮುರಿಗೆ ಕಟ್ಟಿದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ 7ನೇ ಪಂದ್ಯದಲ್ಲಿ2 ಅಂಕಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸತತ ನಾಲ್ಕನೇ ಪಂದ್ಯ ಗೆದ್ದು ಒಟ್ಟಾರೆ 8 ಅಂಕ ಕಲೆಹಾಕಿತು.
ಎಸ್‌ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿಸೋಮವಾರ ನಡೆದ ದ್ವಿತೀಯ ಪಂದ್ಯದಲ್ಲಿಬುಲ್ಸ್ 34-32 ಅಂಕಗಳಿಂದ ಟೈಟನ್ಸ್‌ಗೆ ಸೋಲುಣಿಸಿತು. ಅತ್ತ ಟೈಟನ್ಸ್ ನಾಲ್ಕನೇ ಸೋಲಿಗೆ ಗುರಿಯಾಯಿತು. ಬೆಂಗಳೂರು ಬುಲ್ಸ್ ತಂಡದ ಪರ ಮತ್ತೊಮ್ಮೆ ಮಿಂಚಿದ ಅಲಿರೇಜಾ ಮಿರ್ಜಾಯಿನ್(11 ಅಂಕ), ಯೋಗೇಶ್(3 ಅಂಕ), ಗಣೇಶ (7 ಅಂಕ) ಮಿಂಚಿದರೆ, ತೆಲುಗು ಟೈಟನ್ಸ್ ತಂಡದ ಪರ ವಿಜಯ್ ಮಲಿಕ್(9 ಅಂಕ) ಮತ್ತು ಆಲ್‌ರೌಂಡರ್ ಭರತ್( 13 ಅಂಕ) ಗಮನ ಸೆಳೆದರಾದರೂ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
22-26ರಲ್ಲಿ ಹಿನ್ನಡೆ ತಗ್ಗಿಸುವ ಹೋರಾಟ ಮುಂದುವರಿಸಿದ ಬುಲ್ಸ್, ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು. ಇದರ ಫಲವಾಗಿ ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳು ಬಾಕಿ ಇರುವಾಗ ವಿಜಯ್ ಮಲಿಕ್ ಅವರನ್ನು ಕಟ್ಟಿಹಾಕಿದ ಸಾಹಿಲ್ ರಾಣಿ, ಪಂದ್ಯದಲ್ಲಿಮೊದಲ ಬಾರಿಗೆ ಬುಲ್ಸ್ ತಂಡಕ್ಕೆ ಆಲೌಟ್ ಪಾಯಿಂಟ್ಸ್ ತಂದುಕೊಟ್ಟರು. ಹೀಗಾಗಿ ಬುಲ್ಸ್ 26-27ರಲ್ಲಿಪ್ರಬಲ ಹೋರಾಟ ನೀಡಿತು. ನಂತರ 28-27ಕ್ಕೆ ಹೆಚ್ಚಿಸಿ ಪಂದ್ಯದಲ್ಲಿಮೊದಲ ಸಲ ಮೈಲುಗೈ ಸಾಧಿಸಿತು. ಕೊನೆಯ ಎರಡು ನಿಮಿಷ ಉಭಯ ತಂಡಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಬುಲ್ಸ್ ಕಂಗೊಳಿಸಿತು.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡುವ ಇರಾದೆಯೊಂದಿಗೆ ಉಭಯ ತಂಡಗಳು ಆಟ ಮುಂದುವರಿಸಿದವು. ಆದರೆ ಮೊದಲಾರ್ಧಕ್ಕಿಂತ ಹೆಚ್ಚಿನ ಭಿನ್ನತೆ ಇರಲಿಲ್ಲ. ಪ್ರತಿ ಪಾಯಿಂಟ್ಸ್‌ಗೂ ಎರಡೂ ತಂಡಗಳು ತಿಣುಕಾಡಿದವು. 25ನೇ ನಿಮಿಷಗಳ ಮುಕ್ತಾಯಕ್ಕೆ 15-20ರಲ್ಲಿಹಿನ್ನಡೆಯಲ್ಲಿದ್ದ ಬುಲ್ಸ್, ಪುಟಿದೇಳುವ ಸುಳಿವು ನೀಡಿತು. ಟೈಟನ್ಸ್ ಕೂಡ ಅಷ್ಟೇ ಪ್ರತಿರೋಧ ನೀಡುವ ಮೂಲಕ ಮುನ್ನಡೆ ಕಾಯ್ದುಕೊಳ್ಳುವ ಛಲ ತೋರಿತು. ಹೀಗಾಗಿ ಪಂದ್ಯದ ಕೊನೆಯ ಹತ್ತು ನಿಮಿಷ ಇನ್ನಷ್ಟು ಕುತೂಹಲಕ್ಕೆ ಕಾರಣವಾಯಿತು.
ಸಂಘಟಿತ ಹೋರಾಟ ನೀಡಿದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಪಂದ್ಯದ ಮೊದಲ ಅವಧಿಗೆ ತೆಲುಗು ಟೈಟನ್ಸ್ ವಿರುದ್ಧ 3 (11-14) ಅಂಕಗಳ ಹಿನ್ನಡೆ ಅನುಭವಿಸಿತು. ಉಭಯ ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಕಾರಣ ರೇಡರ್‌ಗಳು ಪಾಯಿಂಟ್ಸ್ ಪಡೆಯಲು ತಿಣುಕಾಡಿದರು.
ಪೂರ್ವಾರ್ಧದಲ್ಲಿ5 ಟ್ಯಾಕಲ್ ಮತ್ತು 6 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ ಬುಲ್ಸ್, ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡಿತು. ಅತ್ತ ರೇಡಿಂಗ್ ವಿಭಾಗದಲ್ಲಿ8 ಅಂಕ ಗಳಿಸಿದ ಟೈಟನ್ಸ್ ಟ್ಯಾಕಲ್‌ನಲ್ಲಿ4 ಹಾಗೂ ಎರಡು ಬೋನಸ್ ಪಾಯಿಂಟ್ಸ್ ಗಳಿಸಿತು. ನಾಯಕ ಹಾಗೂ ಡಿಫೆಂಡರ್ ಯೋಗೇಶ್ ಮತ್ತು ಆಲ್‌ರೌಂಡರ್ ಅಲಿರೇಜಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡಿದ್ದು, ಬುಲ್ಸ್ ಹಿನ್ನಡೆಗೆ ಕಾರಣವಾಯಿತು. ಅತ್ತ 7 ಅಂಕ ಗಳಿಸಿ ನಾಯಕನ ಜವಾಬ್ದಾರಿ ನಿಭಾಯಿಸಿ ವಿಜಯ್ ಮಲಿಕ್ ಟೈಟನ್ಸ್‌ಗೆ ಆತ್ಮವಿಶ್ವಾಸ ತುಂಬಿದರು.
ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿಸೆಪ್ಟೆಂಬರ್ 16ರಂದು ತಮಿಳ್ ತಲೈವಾಸ್ ತಂಡದ ಸವಾಲು ಎದುರಿಸಲಿದೆ.