ಬೆಂಗಳೂರು: ತಿಂಗಳಿಗೆ ಇಂತಿಷ್ಟೇ ಅಂತ ಸಂಬಳ ಬರುವವರು, ಕಡಿಮೆ ಆದಾಯದ ವ್ಯಾಪಾರ ಮಾಡುವವರು ಲಕ್ಷಾಂತರ ರೂಪಾಯಿಯನ್ನು ಗಳಿಸುವುದು ಕಷ್ಟಸಾಧ್ಯ. ಆದರೆ, ತಿಂಗಳಿಗೆ ಇಂತಿಷ್ಟೇ ಅಂತ ಹಣ ಉಳಿತಾಯ ಮಾಡಿದರೆ, ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿದರೆ ಮಾತ್ರ ಲಕ್ಷಾಂತರ ರೂ. ಗಳಿಸಬಹುದಾಗಿದೆ. ಹೀಗೆ ಮಧ್ಯಮ ವರ್ಗದವರೂ ಲಕ್ಷಾಂತರ ರೂಪಾಯಿ ಗಳಿಸಲು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಉತ್ತಮ ಯೋಝನೆಯಾಗಿದೆ.
ಪಿಪಿಎಫ್ ಯೋಜನೆಯಲ್ಲಿ ಪ್ರತಿ ವರ್ಷ ಕನಿಷ್ಠ 500 ರೂ.ನಿರಿಂದ ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯು ಅವಧಿ 15 ವರ್ಷಗಳಾಗಿದ್ದು, ನೀವು 15 ವರ್ಷಗಳ ಕಾಲ ನಿಯಮಿತವಾಗಿ ಹೂಡಿಕೆ ಮಾಡಿದರೆ, ಮೈಚ್ಯೂರಿಟಿ ನಂತರ ನಿಮ್ಮ ಕೈಗೆ ದೊಡ್ಡ ಮೊತ್ತ ಸಿಗುತ್ತದೆ. ಪ್ರಸ್ತುತ ಈ ಯೋಜನೆಯಲ್ಲಿ ವರ್ಷಕ್ಕೆ 7.1% ಬಡ್ಡಿ ಲಭ್ಯವಿದೆ, ಇದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
6.78 ಲಕ್ಷ ರೂ. ಗಳಿಸೋದು ಹೇಗೆ?
ನೀವು ಪ್ರತಿದಿನವೂ 70 ರೂಪಾಯಿಯನ್ನು ಉಳಿಸಿದರೆ, ಒಂದು ತಿಂಗಳಲ್ಲಿ2,100 ರೂಪಾಯಿ ಆಗುತ್ತದೆ. ವರ್ಷಕ್ಕೆ ಇದು 25,200 ರೂಪಾಯಿ ಆಗುತ್ತದೆ. ಇದೇ ರೀತಿಯಲ್ಲಿ 15 ವರ್ಷಗಳ ಕಾಲ ನಿಯಮಿತವಾಗಿ ಮೊತ್ತವನ್ನು ಠೇವಣಿ ಮಾಡುತ್ತೀರಾದರೆ, ನೀವು ಒಟ್ಟಾರೆ 3.75 ಲಕ್ಷ ರೂಪಾಯಿ ಠೇವಣಿ ಮಾಡಿದಂತೆ ಆಗುತ್ತದೆ. ಇದರ ಮೇಲೆ 7.1% ಬಡ್ಡಿ ಸೇರಿಸಿದರೆ, ಮೈಚ್ಯೂರಿಟಿ ನಂತರ ನಿಮಗೆ ಸುಮಾರು 6.78 ಲಕ್ಷ ರೂಪಾಯಿ ಸಿಗುತ್ತದೆ.
ಮಕ್ಕಳು ಹತ್ತನೇ ತರಗತಿ ಅಥವಾ ಇಂಟರ್ ಮೀಡಿಯಟ್ ನಂತರ ಉನ್ನತ ಶಿಕ್ಷಣಕ್ಕಾಗಿ ದೊಡ್ಡ ಕಾಲೇಜಿನಲ್ಲಿ ಸೇರಲು ಇಚ್ಛಿಸಿದಾಗ, ಒಟ್ಟಿಗೆ ದೊಡ್ಡ ಮೊತ್ತದ ಹಣವನ್ನು ಬೇಕಾಗುತ್ತದೆ. ಆ ಸಮಯದಲ್ಲಿ ಈ ಮೊತ್ತ ಭಾರಿ ಅನುಕೂಲವಾಗುತ್ತದೆ. ಮಕ್ಕಳ ಶಿಕ್ಷಣ ಸೇರಿ ಯಾವುದೇ ಭವಿಷ್ಯದ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಹಣ ಉಳಿಸಬಹುದಾಗಿದೆ.



















