ಬೆಂಗಳೂರು : ಕೇಂದ್ರ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಇತ್ತೀಚೆಗೆ ಖಾಸಗಿ ಕಂಪನಿಗಳಿಗೆ ತೀವ್ರ ಸ್ಪರ್ಧೆಯೊಡ್ಡುತ್ತಿದೆ. ಇದಕ್ಕಾಗಿ ಮೊಬೈಲ್ ರಿಚಾರ್ಜ್, ಹೆಚ್ಚಿನ ಇಂಟರ್ನೆಟ್ ಆಫರ್ ನೀಡುತ್ತಿದೆ. ಇದರ ಬೆನ್ನಲ್ಲೇ ಈಗ ಖಾಸಗಿ ಟೆಲಿಕಾಂ ಕಂಪನಿಗಳ ಪೈಪೋಟಿಯ ನಡುವೆ ಗ್ರಾಹಕರನ್ನು ಸೆಳೆಯಲು ವಿಶೇಷ ಕೊಡುಗೆ ಘೋಷಿಸಿದೆ. ಪ್ರೈವೇಟ್ ಕಂಪನಿಗಳು ರಿಚಾರ್ಜ್ ದರಗಳನ್ನು ಹೆಚ್ಚಿಸುತ್ತಿದ್ದರೆ, ಬಿಎಸ್ಎನ್ಎಲ್ ಮಾತ್ರ ತನ್ನ ವೈಫೈ ಪ್ಲಾನ್ ಬೆಲೆ (BSNL SuperStar Premium WiFi) ಕಡಿಮೆ ಮಾಡುವ ಮೂಲಕ ಗಮನ ಸೆಳೆದಿದೆ.
ಹೌದು.. ಬಿಎಸ್ಎನ್ಎಲ್ನ ಜನಪ್ರಿಯ ‘ಸೂಪರ್ ಸ್ಟಾರ್ ಪ್ರೀಮಿಯಂ ವೈಫೈ’ ಪ್ಲಾನ್ ಬೆಲೆಯನ್ನು ಈಗ ಇಳಿಕೆ ಮಾಡಲಾಗಿದೆ. ಈ ಹಿಂದೆ ಪ್ರತಿ ತಿಂಗಳಿಗೆ 999 ರೂ. ಇದ್ದ ಈ ಪ್ಲಾನ್, ಈಗ 799 ರೂ.ಗೆ ಲಭ್ಯವಿದೆ. ಈ ಆಫರ್ ಮಾರ್ಚ್ 31 ರವರೆಗೆ ಚಾಲ್ತಿಯಲ್ಲಿರಲಿದೆ ಎಂದು ಕಂಪನಿ ತಿಳಿಸಿದೆ.
ಪ್ಲಾನ್ ವಿಶೇಷತೆಗಳು ಏನೇನು?
ವೇಗ: 200 Mbps ಅಲ್ಟ್ರಾ ಹೈ-ಸ್ಪೀಡ್ ಇಂಟರ್ನೆಟ್
ಡೇಟಾ: ಪ್ರತಿ ತಿಂಗಳು 5000 GB ಡೇಟಾ ಸೌಲಭ್ಯ
ಒಟಿಟಿ: ಜನಪ್ರಿಯ OTT ಪ್ಲಾಟ್ ಫಾರ್ಮ್ ಗಳ ಉಚಿತ ಚಂದಾದಾರಿಕೆ.
ಹೆಚ್ಚುವರಿ ರಿಯಾಯಿತಿ: ಒಂದು ವೇಳೆ ಗ್ರಾಹಕರು 12 ತಿಂಗಳ ಹಣವನ್ನು ಮುಂಗಡವಾಗಿ ಪಾವತಿಸಿದರೆ, ಅವರಿಗೆ ಒಟ್ಟು ಮೊತ್ತದ ಮೇಲೆ ಶೇ.20ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ.
ಅಪ್ ಗ್ರೇಡ್ ಮಾಡುವುದು ಹೇಗೆ?
ಗ್ರಾಹಕರು ತಮ್ಮ ಮನೆಯ ವೈಫೈ ಪ್ಲಾನ್ ಅನ್ನು ಅಪ್ ಗ್ರೇಡ್ ಮಾಡಲು ಬಿಎಸ್ಎನ್ಎಲ್ ಅಧಿಕೃತ ವಾಟ್ಸ್ ಆ್ಯಪ್ ಸಂಖ್ಯೆ 1800 4444 ಗೆ ‘Hi’ ಎಂದು ಸಂದೇಶ ಕಳುಹಿಸಬೇಕು. ನಂತರ ಬರುವ ಸೂಚನೆಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಈ ಪ್ಲಾನ್ ಪಡೆದುಕೊಳ್ಳಬಹುದು. ಕಡಿಮೆ ದರದಲ್ಲಿ ಹೆಚ್ಚಿನ ಡೇಟಾ ಮತ್ತು ವೇಗವನ್ನು ಬಯಸುವ ಗ್ರಾಹಕರಿಗೆ ಬಿಎಸ್ಎನ್ಎಲ್ ನೀಡಿರುವ ಈ ಆಫರ್ ಒಳ್ಳೆಯ ಕೊಡುಗೆಯಾಗಿದೆ.
ಇದನ್ನೂ ಓದಿ : ಕಾಫಿ ಬಿಲ್ ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಕಾನ್ಸ್ಟೇಬಲ್ಸ್ ಹಲ್ಲೆ.. ವಿಡಿಯೋ ವೈರಲ್!


















