ಬಾಗಲಕೋಟೆ : ಅಬಕಾರಿ ಇಲಾಖೆಯಲ್ಲಿನ ಲಂಚಾವತಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪು ತಿಂದವ ನೀರು ಕುಡಿಯಲೇ ಬೇಕು ಹಾಗೆಯೇ ತಪ್ಪು ಮಾಡಿದವ ಶಿಕ್ಷೆ ಅನುಭವಿಸಲೇ ಬೇಕು ಎಂದು ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಮಾಧ್ಯಮಗಾರರೊಂದಿಗೆ ಮಾತನಾಡುತ್ತಾ, ಈ ವಿಚಾರವಾಗಿ ಸಿಎಂ ಅವರು ನನ್ನ ಏನೂ ಕೇಳಿಲ್ಲ. ನಾನು ತಪ್ಪು ಮಾಡಿಲ್ಲ, ಹಾಗಾಗಿ ಅವರಲ್ಲಿ ಕೇಳಿಲ್ಲ. ಇದರಲ್ಲಿ ಕುತಂತ್ರ ನಡೆಯುತ್ತಿದೆ. ನಾನು ಕಾನೂನು ಕ್ರಮಕೈಗೊಳ್ಳುವೆ ಎಂದಿದ್ದಾರೆ.
ತಮ್ಮನ್ನ ಮಾತನಾಡಿದ ಆಡಿಯೋದಲ್ಲಿ ಮಂತ್ರಿಗಳ ಹೆಸರು ಹೇಳ್ತಾರಾ, ಮುಖ್ಯಮಂತ್ರಿಗಳ ಹೆಸರು ಹೇಳ್ತಾರಾ. ಈಗ ಹತ್ತು ಲಕ್ಷ ಕೊಡ್ತೇನೆ ನಿಮಗೆ ನ್ಯೂಸ್ ಹಾಕಬೇಡಿ ಯಾರಾದ್ರು ಅಂದ್ರೆ ನೀವು ಆಪಾದಿತರಾಗಿಬಿಡ್ತೀರಾ? ಇದರಲ್ಲಿ ಕುತಂತ್ರ ಇದೆ. ಕಾನೂನು ಕ್ರಮ ಕೈಗೊಳ್ಳುವೆ. ಉಪ್ಪು ತಿಂದವ ನೀರು ಕುಡಿಯಲೇ ಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ಮಹಿಳೆಯರು ಪರದಾಟ



















