ಬೆಂಗಳೂರು : ಎಲೆಕ್ಟ್ರಿಸಿಟಿಸಿ NOCಗೆ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರೆಡ್‌ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
KPTCL ಎಕ್ಸಿಕ್ಯೂಟಿವ್ ಇಂಜಿನಿಯರ್ ಜ್ಯೋತಿ ಪ್ರಕಾಶ್ ಹಾಗೂ ಖಾಸಗಿ ವ್ಯಕ್ತಿ ನವೀನ್ ಲೋಕಾ ಬಲೆಗೆ ಬಲೆಗೆ ಬಿದ್ದಿದ್ದು, ಸದ್ಯ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಇಬ್ಬರು ಗುತ್ತಿಗೆದಾರ ಅನಂತ್ ಎಂಬವರ ಬಳಿ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮುಂಗಡವಾಗಿ 50 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಟೀಂ ಭ್ರಷ್ಟ ಇಂಜಿನಿಯರ್ ಜ್ಯೋತಿ ಪ್ರಕಾಶ್ ಹಾಗೂ ಖಾಸಗಿ ವ್ಯಕ್ತಿ ನವೀನ್‌ನನ್ನು ಲಾಕ್ ಮಾಡಿದೆ.
ಲೋಕಾ ಡಿವೈಎಸ್ಪಿ ಬಸವರಾಜ್ ಮುಗ್ದಮ್ ಟೀಂ ಈ ಕಾರ್ಯಾಚರಣೆ ನಡೆಸಿದ್ದು, ಸದ್ಯ ಲಂಚಬಾಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಜ್ಯೋತಿ ಪ್ರಕಾಶ್ ಹಾಗೂ ನವೀನ್‌ನ್ನು ಅರೆಸ್ಟ್ ಮಾಡಿ ತನಿಖೆ ಮುಂದುವರೆಸಿದೆ.