ಥಾಣೆ : ಮನೆಯ ಸಮೀಪವೇ ಆಟವಾಡುತ್ತಿದ್ದ ಬಾಲಕನ ಮೇಲೆ ನಾಯಿಯೊಂದು ದಾಳಿ ನಡೆಸಿ ಕೊಂದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಆತನನ್ನು ರಕ್ಷಿಸಲು ಬಂದ ಸ್ನೇಹಿತನ ಮೇಲೂ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಇದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಾಯಿಗಳಿಂದ ಹೆಚ್ಚುತ್ತಿರುವ ಬೆದರಿಕೆಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಧಿಕಾರಿಗಳ ಬಳಿ ಆಗ್ರಹಿಸಿದ್ದಾರೆ.
ಕಲ್ಯಾಣ್ನಲ್ಲಿ ಗುರುವಾರ ಮಧ್ಯಾಹ್ನ ಮನೆ ಸಮೀಪವೇ ಆಡುತ್ತಿದ್ದ ಏಳು ವರ್ಷದ ಬಾಲಕ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಬಾಲಕನ ಕಿರುಚಾಟ ಕೇಳಿ ಓಡಿ ಬಂದು ರಕ್ಷಣೆಗೆ ಮುಂದಾದ ಇನ್ನೋರ್ವ ಬಾಲಕನ ಮೇಲೂ ನಾಯಿ ದಾಳಿ ನಡೆಸಿದೆ. ಈ ದಾಳಿಯಿಂದ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಖುಶಿಲ್ ಶಂಕರ್ ವಾಘೆ ತನ್ನ ಮನೆಯ ಬಳಿ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಬೀದಿ ನಾಯಿಯೊಂದು ಹಠಾತ್ತನೆ ಆತನ ಮೇಲೆ ದಾಳಿ ಮಾಡಿದೆ. ಅವನ ಕಿರುಚಾಟ ಕೇಳಿ ಓಡಿ ಬಂದ ನೀಲೇಶ್ ಬಾಗ್ಲೆ ಮೇಲೂ ನಾಯಿ ದಾಳಿ ನಡೆಸಿತ್ತು. ತಕ್ಷಣವೇ ಸ್ಥಳೀಯರು ಸೇರಿ ನಾಯಿಯನ್ನು ಓಡಿಸಿ ಬಾಲಕರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿಕಿತ್ಸೆ ಪಡೆಯುತ್ತಿರುವಾಗ ಖುಶಿಲ್ ಸಾವನ್ನಪ್ಪಿದ್ದು, ನೀಲೇಶ್ ಗೆ ಚಿಕಿತ್ಸೆ ಥಾಣೆ ಆಸ್ಪತ್ರೆಯಲ್ಲಿ ಮುಂದುವರಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ಯಾರೂ ಹೊರಗೆ ಬರಬೇಡಿ.. ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ!



















