ಫ್ಯಾಷನ್ ಜಗತ್ತಿನ ಅತಿದೊಡ್ಡ ಕಾರ್ಯಕ್ರಮ ಮೆಟ್ ಗಾಲಾದಲ್ಲಿ ಬಾಲಿವುಡ್ ತಾರೆಯರು ಮಿಂಚಿದ್ದಾರೆ.

ಅದರಲ್ಲೂ ಏಳು ತಿಂಗಳ ಗರ್ಭಿಣಿ ನಟಿ ಕಿಯಾರ ಅಡ್ವಾಣಿ ತಮ್ಮ ಬೇಬಿ ಬಂಪ್ ನೊಟ್ಟಿಗೆ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಕಪ್ಪು ಮತ್ತು ಗೋಲ್ಡನ್ ಬಣ್ಣದ ಗೌನ್ ತೊಟ್ಟು ಬಂದ ಕಿಯಾರ ಫ್ಯಾಷನ್ ಕಾರ್ಯಕ್ರಮದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ನ್ಯೂಯಾರ್ಕ್ ನ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಶೋನಲ್ಲಿ ಹಾಲಿವುಡ್ ತಾರೆಯರ ಜೊತೆ ಬಾಲಿವುಡ್ ನ ಕಿಂಗ್ ಶಾನ್ ಕಪ್ಪು ಬಣ್ಣದ ಪಠಾಣ್ ಧಿರಿಸಿನಲ್ಲಿ ಕೈಯಲ್ಲಿ ಖಡ್ಗ ಹಿಡಿದು ರಾರಾಜಿಸಿದ್ದರು. ಪಂಜಾಬಿ ನಟ ದಿಲ್ಜಿತ್ ದೋಸ್ಸಾಂಜ್ ಕೂಡಾ ದೇಸಿ ಪೋಷಾಕಿನಲ್ಲಿ ನೆರೆದಿದ್ದವರ ಕಣ್ಮನಸೆಳೆದರು.


















