ಬಾಲಿವುಡ್ ತಾರೆ ಮುಕುಲ್ ದೇವ್ ವಿಧಿವಶರಾಗಿದ್ದಾರೆ.
54 ವರ್ಷದ ಮುಕುಲ್ ದೇವ್ ಸನ್ ಆಫ್ ಸರ್ದಾರ್, ರಾಜ್ ಕುಮಾರ್, ಜೈಹೋ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಬೈನಲ್ಲಿ ನೆಲೆಸಿದ್ದ ಮುಕುಲ್ ಸಾವಿಗೆ ಇನ್ನೂ ನಿಖರ ಕಾರಣ ಬಹಿರಂಗವಾಗಿಲ್ಲ. ಆದರೆ ಅವರ ಆಪ್ತೆ ನಟಿ ದೀಪ್ಷಿಕಾ ನಾಗ್ಪಾಲ್ ಮುಕುಲ್ ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೃತ ಮುಕುಲ್ ಗೆ ಸ್ಯಾಂಡಲ್ ವುಡ್ ನಂಟಿದೆ ಎನ್ನುವುದು ಗಮನಾರ್ಹ.
ಉಪೇಂದ್ರ ಅಭಿನಯದ ರಜಿನಿ, ನಾಗರಹಾವು ಸಿನಿಮಾಗಳಲ್ಲಿ ಮುಕುಲ್ ಅಭಿನಯಿಸಿದ್ದಾರೆ. ಮಾಡೆಲ್ ಆಗಿದ್ದ ಮುಕುಲ್ ನಂತ್ರ ಚಿತ್ರರಂಗಕ್ಕೆ ಬಂದು ತಮ್ಮದೇ ಆದ ಇಮೇಜ್ ಸೃಷ್ಟಿಸಿಕೊಂಡಿದ್ರು. ಮೃತ ಮುಕುಲ್ ದೇವ್ ಖ್ಯಾತ ನಟ ರಾಹುಲ್ ದೇವ್ ರ ಸಹೋದರ. ನಟನ ಸಾವಿನಸುದ್ದಿ ಕೇಳಿ ಸಂಪೂರ್ಣ ಬಾಲಿವುಡ್ ಶಾಕ್ ಗೆ ಒಳಗಾಗಿದೆ.