ಮುಂಬೈ: ಐಪಿಎಲ್ (IPL 2025) 18ನೇ ಸೀಸನ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗ ಉದ್ಘಾಟನಾ ಸಮಾರಂಭಕ್ಕೆ ಯಾರು ಬರುತ್ತಾರೆಂಬ ಮಾಹಿತಿ ಹೊರ ಬಿದ್ದಿದ್ದು, ಅಭಿಮಾನಿಗಳು ಸಂತಸದಲ್ಲಿ ತೇಲುತ್ತಿದ್ದಾರೆ.
ಮಾ.22ರಂದು ಐಪಿಎಲ್ 2025ರ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್ (Bollywood) ಸ್ಟಾರ್ಸ್ ಸಾಕ್ಷಿಯಾಗಲಿದ್ದಾರೆ. ಶಾರುಖ್ ಖಾನ್, ದಿಶಾ ಪಟಾನಿ, ಗಾಯಕಿ ಶ್ರೇಯಾ ಘೋಷಾಲ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ (RCB) ಮುಖಾಮುಖಿ ಆಗಲಿದೆ. ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಲ್ ಗಾಯನ, ದಿಶಾ ಪಟಾನಿ (Disha Patani) ಡ್ಯಾನ್ಸ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಅಲ್ಲದೇ, ಕತ್ರಿನಾ ಕೈಫ್, ವರುಣ್ ಧವನ್, ಸಲ್ಮಾನ್ ಖಾನ್, ತೃಪ್ತಿ ದಿಮ್ರಿ, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರು ಕೂಡ ಭಾಗಿಯಾಗಲಿದ್ದಾರೆ. ಐಪಿಎಲ್ ನಲ್ಲಿ ಒಟ್ಟು 23 ಕಡೆಗಳಲ್ಲಿ 74 ಮ್ಯಾಚ್ ಗಳು ನಡೆಯಲಿವೆ. ಮೇ 25ರಂದು ಫಿನಾಲೆ ನಡೆಯಲಿದೆ.