ಐಪಿಎಲ್ 2025ರ ಉದ್ಘಾಟನಾ ಸಮಾರಂಭಕ್ಕೆ ಕಳೆ ತಂದುಕೊಟ್ಟ ಬಾಲಿವುಡ್ ಬಾದ್‌ಷಾ ಶಾರೂಖ್ ಖಾನ್, ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ‘ಗೋಲ್ಡ್ ಜನರೇಷನ್’ (ಸುವರ್ಣ ಪೀಳಿಗೆ) ಎಂದು ಕೊಂಡಾಡಿದರು.
ತಮ್ಮನ್ನು ‘ಓಲ್ಡ್ ಜನರೇಷನ್’ (ಹಳೆಯ ಪೀಳಿಗೆ) ಎಂದು ಹಾಸ್ಯವಾಗಿ ಪರಿಚಯಿಸಿಕೊಂಡ ಶಾರೂಖ್, ವಿರಾಟ್ ಕೊಹ್ಲಿಯವರನ್ನು “GOAT” (Greatest of All Time) ಮತ್ತು ಐಪಿಎಲ್‌ನ “ಗೋಲ್ಡ್ ಜನರೇಷನ್” ಎಂದು ಹರ್ಷದಿಂದ ಕರೆದರು. ಕೊಹ್ಲಿಯನ್ನು ವೇದಿಕೆಗೆ ಆಹ್ವಾನಿಸಿದ ಶಾರೂಖ್, “ಇವರು ನಮ್ಮ ಎಲ್ಲಾ ಕಾಲದ ಶ್ರೇಷ್ಠ ಆಟಗಾರ” ಎಂದು ಪರಿಚಯಿಸಿ, ಅಭಿಮಾನಿಗಳಲ್ಲೂ “ಕೊಹ್ಲಿ, ಕೊಹ್ಲಿ, ಕೊಹ್ಲಿ” ಎಂದು ಕೂಗಲು ಮನವಿ ಮಾಡಿದರು. ಅದಕ್ಕೆ ಉಭಯ ಅಭಿಮಾನಿಗಳಿಂದ ಭರ್ಜರಿ ಸ್ಪಂದನೆ ದೊರಕಿತು.
ಶಾರೂಖ್ ಅವರ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಇತರ ಸ್ಟಾರ್ ಆಟಗಾರರು “ಗೋಲ್ಡ್ ಜನರೇಷನ್”ನ ಭಾಗವಾಗಿದ್ದರೆ, ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಅವರಂಥ ಯುವ ಆಟಗಾರರು “ಬೋಲ್ಡ್ ಜನರೇಷನ್” (ಸಾಹಸಿ ಪೀಳಿಗೆ)ನ ಪ್ರತಿನಿಧಿಗಳು.
“ವಿರಾಟ್ ಕೊಹ್ಲಿಯ ಜತೆ ನಿಂತುಕೊಳ್ಳುವುದು ನನಗೆ ಭಾರಿ ಗೌರವ,” ಎಂದು ಶಾರೂಖ್ ಅಭಿಮಾನದಿಂದ ಹೇಳಿದರು. ಈ ಸಂದರ್ಭ ಅವರು ಕೊಹ್ಲಿಯ ಅಂಡರ್-19 ದಿನಗಳನ್ನು ನೆನೆಸಿಕೊಂಡರು.
ಗೋಲ್ಡ್ ಜನರೇಷನ್ vs ಬೋಲ್ಡ್ ಜನರೇಷನ್
ಶಾರೂಖ್ ನಂತರ ವಿರಾಟ್‌ಗೆ ಪ್ರಶ್ನೆಹೇಳುತ್ತಾ, “ಈ ಬೋಲ್ಡ್ ಜನರೇಷನ್ ಐಪಿಎಲ್‌ನ ಮೇಲೆ ಪ್ರಭಾವ ಬೀರುತ್ತಾ?” ಎಂದು ಕೇಳಿದರು. ಕೊಹ್ಲಿ ಉತ್ತರಿಸುತ್ತಾ, “ಬೋಲ್ಡ್ ಜನರೇಷನ್ ವೇಗವಾಗಿ ಉರುಳುತ್ತಿದೆ, ಆದರೆ ಹಳೆ ಪೀಳಿಗೆಯು ಇನ್ನೂ ಜೀವಂತವಾಗಿದೆ. ನಾವು ಇನ್ನೂ ಪ್ರಭಾವ ಬೀರಬಹುದು, ಇನ್ನೂ ಆಟವಾಡುತ್ತೇವೆ. ಈ ಅಪಾರ ಅಭಿಮಾನಿಗಳಿಗಾಗಿ ಮುಂದಿನ ವರ್ಷಗಳಲ್ಲೂ ಸ್ಮರಣೀಯ ಕ್ಷಣಗಳನ್ನು ನೀಡಲು ಬಯಸುತ್ತೇವೆ,” ಎಂದು ಹೇಳಿದರು.
ಪರಿಣಾಮವಾಗಿ, ವೇದಿಕೆಯಲ್ಲಿ ಶಾರೂಖ್ ಖಾನ್ ರಿಂಕು ಸಿಂಗ್ ಮತ್ತು ವಿರಾಟ್ ಕೊಹ್ಲಿಯ ಜತೆ ಪಠಾನ್ ಚಿತ್ರದ ಹಿಟ್ ಹಾಡುಗಳಿಗೆ ಡಾನ್ಸ್ ಮಾಡಿ ಸಮಾರಂಭವನ್ನು ಇನ್ನಷ್ಟು ರಂಜಿಸಿದರು.
ಕೆಕೆಆರ್ vs ಆರ್‌ಸಿಬಿ ಆರಂಭಿಕ ಪಂದ್ಯ
ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಪೂರಕ ತಯಾರಿಯೊಂದಿಗೆ ಬಂದಿರುವ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಇನ್ನೂ ಐಪಿಎಲ್ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಇವೆರೆಡೆ ತಂಡಗಳು 2008ರ ಐಪಿಎಲ್ ಆರಂಭಿಕ ಪಂದ್ಯದಲ್ಲೂ ಮುಖಾಮುಖಿಯಾಗಿದ್ದವು — ಆ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು.