ಬೆಂಗಳೂರು: ಬಿಎಂಟಿಸಿ (BMTC) ಬಸ್ ಬ್ರೇಕ್ ಆಗಿರುವ ಘಟನೆಯೊಂದು ನಡೆದಿದೆ.
ನಗರದ ನಾಗದೇವನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಎಲೆಕ್ಟ್ರಿಕಲ್ ಬಸ್ ಬ್ರೇಕ್ ಫೇಲ್ ಆಗಿ ಬೀಡಾ ಅಂಗಡಿ ಹಾಗೂ ಡಾಬಾ ಗೋಡೆಗೆ ಡಿಕ್ಕಿ (Accident) ಹೊಡೆದಿದೆ.
ಇಂದು ಬೆಳಗ್ಗೆ 6:27ರ ಸುಮಾರಿಗೆ ಬಸ್ ಶಿರ್ಕೆ ಸರ್ಕಲ್ ನಿಂದ ನಾಗರಭಾವಿ ಕಡೆಗೆ ತೆರಳುತ್ತಿತ್ತು. ಅಪಘಾತದ ಸಂದರ್ಭದಲ್ಲಿ ಬಸ್ ನಲ್ಲಿ ಮೂವರಿದ್ದರು. ಆದರೆ, ಮೂವರಿಗೂ ಯಾವುದೇ ತೊಂದರೆಯಾಗಿಲ್ಲ. ಬೆಳಗಿನ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಈ ವೇಳೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಹೀಗಾಗಿ ಅನಾಹುತ ತಪ್ಪಿದಂತಾಗಿದೆ. ಅಪಘಾತದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.