ಚಿತ್ರದುರ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ 388 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ನೀತಿ ನಿಯಮಗಳನ್ನು ಮೀರಿ ಅನುದಾನ ಬಿಡುಗಡೆ. ಮಠ, ಅಥವಾ ಸಂಸ್ಥೆಗೆ 1 ಕೋಟಿ ರೂ. ಅನುದಾನ ನೀಡಿದರೇ ಶೇ. 25ರಷ್ಟು ಗ್ರ್ಯಾಂಟ್ ಇಟ್ಟು ಕೊಡಬೇಕು. ಫ್ರೂಫ್ ಇಲ್ಲದೇ ಮಾತನಾಡಲ್ಲ, ಅದಕ್ಕೆ ಫ್ರೂಫ್ ಕೊಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ದುಡ್ಡು ಇರದೆ ಕಾಮಗಾರಿ ಬಂದ್ ಮಾಡುವಂತೆ ಸಿಎಂ ಹೇಳಿದ್ದರು. ಜನರಿಗೆ ಯಾಮಾರಿಸುವ ಕೆಲಸ ಬಿಜೆಪಿಯವರು ಮಾಡುತ್ತಾರೆ. ದುಡ್ಡು ಕೊಡದೇ ಬರೀ ಪೇಪರ್ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ನಿಗಮ ಮಾಡಿದ್ದರು. ಪ್ರತಿ ನಿಗಮ ಮಾಡುವಾಗ 5 ಕೋಟಿ ರೂ. ಹಣ ಇಡಬೇಕು. ಆದರೆ, 10 ನಿಗಮಗಳಲ್ಲಿ 10 ರೂ. ಹಣ ಇಡದೆ ಸ್ಥಾಪನೆ ಮಾಡಿದ್ದಾರೆಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸಿದ್ಧರಾಮಯ್ಯ ಸರ್ಕಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ. 25ರಷ್ಟು ಇಟ್ಟೇ ಮಾಡ್ತೀವಿ. ಆದರೇ ಬಿಜೆಪಿಯವರು ನಿಯಮ ಬಾಹಿರ ನಿಗಮ ಮಾಡಿದ್ದಾರೆ. ಕಾಡುಗೊಲ್ಲ ಅಭಿವೃದ್ಧಿ ನಿಗಮ ನಾನೇ ರೆಜಿಸ್ಟರ್ ಮಾಡಿಸಿದ್ದು, 5 ಕೋಟಿ ರೂ. ಹಣ ಇಟ್ಟು, ದೆಹಲಿಯಲ್ಲಿ ಅದನ್ನು ರಜಿಸ್ಟರ್ ಮಾಡ್ಸಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.