ಬಿಜೆಪಿ ಎಂಎಲ್ ಸಿ ರವಿಕುಮಾರ್ ಸಮಸ್ತ ಹೆಣ್ಣು ಕುಲಕ್ಕೇ ಅಪಮಾನವೆಸಗಿದ್ದಾರೆ. ಮಹಿಳಾ ಅಧಿಕಾರಿಗಳ ಬಗ್ಗೆ ಕೀಳು ಪದಗಳನ್ನು ಬಳಸಿರುವ ರವಿಕುಮಾರ್ ಬಿಜೆಪಿಯ ಕುಟಿಲ ರಾಜಕಾರಣದ ಮುಖವಾಡ ಬಯಲಾಗಿಸಿದ್ದಾರೆ ಎಂದು ಬೀದರ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿಕುಮಾರ್ ಬಾಯಿ ತೆಗೆದ್ರೆ ಸಾಕು ಇಂಥಾ ಕೆಟ್ಟ ಮಾತುಗಳನ್ನೇ ಆಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ಬಿಜೆಪಿಯವರ ಸಂಸ್ಕೃತಿಯನ್ನು ತೆರೆದಿಡ್ತಿದೆ. ಇಂಥಾ ಕೆಟ್ಟು ಮಾತುಗಳನ್ನಾಡುವುದು ರವಿಕುಮಾರ್ ಅವರಿಗೆ ಅಭ್ಯಾಸವಾಗಿ ಹೋಗಿದೆ. ಬಿಜೆಪಿಯವರು ಒಂದೆಡೆ, ರಾವಣನ ಕತೆಯನ್ನೂ ಹೇಳ್ತಾರೆ, ಇನ್ನೊಂದೆಡೆ ರಾಮ-ಸೀತೆಯ ಕತೆಯನ್ನೂ ಹೇಳ್ತಾರೆ. ಆದ್ರೆ ಅವರ ಬಾಯಿಂದ ಕೇವಲ ಇಂಥಾ ಕೀಳು ಪದಗಳೇ ಬರ್ತವೆ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.