ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಸಂಸತ್ ಭವನದಲ್ಲಿ ಹಿಂದೂಗಳು “ಹಿಂಸಾವಾದಿಗಳು” ಎಂದು ಹೇಳುವ ಮೂಲಕ ಹಿಂದೂ ಧರ್ಮದ ಅವಹೇಳನ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಬೈಂದೂರು ಯುವ ಮೋರ್ಚಾದಿಂದ ಪ್ರತಿಭಟನೆ. ನಡೆಸಲಾಯಿತು

“ತ್ರಾಸಿಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು ರವರು “ಹಿಂದೂ ಧರ್ಮ ಎಂದರೆ ಹಿಂಸಾವಾದಿಗಳು.. ಹಿಂದುಗಳೆಂದರೆ ಅಸತ್ಯ ನುಡಿಯುವವರು.. ಹಿಂದುಗಳೆಂದರೆ ದೊಂಬಿ ನಡೆಸುವವರು.”. ಎನ್ನುವ ಮೂಲಕ “ಪವಿತ್ರ ಹಿಂದೂ ಧರ್ಮ”ದ ಮೇಲೆ ಕಳಂಕ ತರುವ ಮಾತಾಡಿ, ಇಡಿಯ ನಮ್ಮ “ಹಿಂದೂ ಸಮಾಜದ ಭಾವನೆಗಳಿಗೆ ಬೆಂಕಿ ಇಟ್ಟಿದ್ದಾರೆ.” ಸನಾತನ ಧರ್ಮದ ಬಗ್ಗೆ ಅರಿವಿಲ್ಲದೇ , ತಮ್ಮ ನಾಲಿಗೆ ಹರಿಬಿಟ್ಟು, ಕೋಮು ಕದಡುವ ಇಂತಹ ಕೆಟ್ಟ ಸಂಸ್ಕೃತಿಯ ಸಂಸದ ರಾಹುಲ್ ಗಾಂಧಿಯವರು ಈ ಕೂಡಲೇ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು ಮತ್ತು ಅಖಂಡ ಹಿಂದೂ ಧರ್ಮದ ಜನತೆಯ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು
ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗಜೇಂದ್ರ. ಎಸ್ ಬೇಲೆಮನೆಯವರು “ರಾಹುಲ್ ಗಾಂಧಿಯವರ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ರಾಹುಲ್ ತಲೆದಂಡಕ್ಕೆ ಆಗ್ರಹಿಸಿದರು.. ಹಾಗೆಯೇ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾದ ಸುಧಾಕರ್ ಶೆಟ್ಟಿ ನೆಲ್ಯಾಡಿ ಅವರು ಮಾತಾಡಿ, “ಹಿಂದುತ್ವದ ವಿಚಾರಕ್ಕೆ ಯಾರಾದರೂ ದಕ್ಕೆ ತಂದರೆ ಅಂಥವರ ವಿರುದ್ಧ, ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಪ್ರತಿಭಟನಾ ಸಂದರ್ಭದಲ್ಲಿ, ಮಂಡಲ ಉಪಾಧ್ಯಕ್ಷರಾದ ರಾಘವೇಂದ್ರ ನೆಂಪು, ಪ್ರವೀಣ್ ಕೊಡ್ಲಾಡಿ, ಬೈಂದೂರು ಮಹಿಳಾಮೋರ್ಚಾ ಅಧ್ಯಕ್ಷೆ ಶ್ಯಾಮಲ ಕುಂದರ್ , ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಅನಿತಾ ಆರ್. ಕೆ., ಮಾಜಿ ಜಿ.ಪ. ಸದಸ್ಯೆ ಶೋಭಾ ಪುತ್ರನ್, ಪ್ರೇಮಾ, ರವಿ ಖಾರ್ವಿ ಹೊಸಪೇಟೆ, ಮಿಥುನ್ ದೇವಾಡಿಗ, ಮಂಡಲ ಕಾರ್ಯದರ್ಶಿ ಕರಣ್ ಪೂಜಾರಿ, ಮೋಹನ ಗುಜ್ಜಾಡಿ, ಹರೀಶ್ ಮೇಸ್ತ, ರವಿ ಗಾಣಿಗ, ಬಿಜೆಪಿ SC ಮೋರ್ಚಾ ಅಧ್ಯಕ್ಷ ಅಶೋಕ್ ಎನ್ ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ರಾಜಶೇಖರ್ ದೇವಾಡಿಗ, ಒಬಿಸಿ ಮೋರ್ಚಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಸಾದ ಪಿ ಬೈಂದೂರ್, ಯುವಮೋರ್ಚಾ ಉಪಾಧ್ಯಕ್ಷರು ವೇಣುಗೋಪಾಲ್ ಅಜ್ರಿ, ರಾಜೇಶ್ ಎಲ್ ಪಿ ಅರೆಹೊಳೆ, ಜಗದೀಶ್ ಆಲಂದೂರ್, ಜಯಂತ್ ಗಂಗೊಳ್ಳಿ, ನವೀನ್ ಕಾಂಚನ್ ಸೇರಿದಂತೆ, ನೂರಾರು ಬಿಜೆಪಿಯ ಯುವ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು, ರಾಹುಲ್ ಗಾಂಧಿಯವರ ಹೇಳಿಕೆಯ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ ಪಿ ಬೈಂದೂರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದು.
