ವಿಜಯಪುರ : ನಾನು ಪಕ್ಷ ಬಿಟ್ಟ ಮೇಲೆ ವಿಜಯೆಂದ್ರ ವಿಜಯಪುರಕ್ಕೆ ಬರುತ್ತಿದ್ದಾನೆ. ನಾನು ಬಿಜೆಪಿಯಲ್ಲಿದ್ದಾಗ ವಿಜಯೇಂದ್ರಗೆ ಇಲ್ಲಿ ಬರುವುದಕ್ಕೆ ಧೈರ್ಯ ಇರಲಿಲ್ಲ. ಸಭೆ ಮಾಡಲಿ, ಏನಾದರೂ ಮಾಡಲಿ. ವಿಜಯೇಂದ್ರನಿಂದ ಬಿಜೆಪಿ ಉದ್ಧಾರ ಆಗಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಆಗಸ್ಟ್ 2 ರಂದು ಬಿಜೆಪಿ ವಿಭಾಗ ಮಟ್ಟದ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಯತ್ನಾಳ್, ವಿಜಯೆಂದ್ರ, ಯಡಿಯೂರಪ್ಪನ ಯುಗ ಮುಗಿದಿದೆ. ಆತ ಇಲ್ಲಿಗೆ ಬಂದು ಏನನ್ನು ಮಾಡುತ್ತಾನೆ. ಸುಮ್ಮನೆ ಮಾಧ್ಯಮದವರು ಆತನನ್ನು ಹೈಲೆಟ್ ಮಾಡುತ್ತಿದ್ದಾರೆ ಎಂದು ಏಕವಚನದಲ್ಲೇ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.
ಸಿಎಂ ಸ್ಥಾನ ತಪ್ಪಿದೆ ಎಂಬ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ್, ಖರ್ಗೆ ಅವರಿಗೆ ಈ ಹಿಂದೆಯೇ ಸಿಎಂ ಸ್ಥಾನ ಸಿಗಬೇಕಿತ್ತು. ಎರಡನೇ ಭಾರಿ ಸಿದ್ದರಾಮಯ್ಯ ಆಗಲು ಬದಲು ಖರ್ಗೆ ಅವರಿಗೆ ಬಿಟ್ಟುಕೊಡಬೇಕಿತ್ತು. ಈಗಲೂ ಸಿಎಂ ಬದಲಾವಣೆ ಆದರೆ ಖರ್ಗೆ ಅವರನ್ನು ಸಿಎಂ ಮಾಡಿ ಎಂದವರು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೆಂದ್ರ ಡಮ್ಮಿ ಎಂದು ಹೈಕಮಾಂಡ್ ಗೆ ಮನವರಿಕೆ ಆಗಿದೆ. ರಾಜ್ಯಾದ್ಯಕ್ಷ ಸ್ಥಾನ ವಿಳಂ ಮಾಡುತ್ತಿದ್ದಾರೆ ಅಂದ್ರೆ ಅದರ ಅರ್ಥ ಏನು. ವಿಜಯೆಂದ್ರ ಬಿಜೆಪಿ ಅಧ್ಯಕ್ಷನಾಗುವುದಿಲ್ಲ. ಸೋಮಣ್ಣ ಬೇರೆ ಬೇರೆ ಕೆಲಸದ ನಿಮಿತ್ತ ಅಮಿತ್ ಶಾ ಭೇಟಿಯಾಗಿರಬಹುದು. ಸೋಮಣ್ಣ ಕೂಡಾ ಬಿಜೆಪಿ ರಾಜಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ. ವಿಜಯೆಂದ್ರ ಬದಲಾವಣೆ ಖಚಿತ. ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ಬರುವುದು ನಿಶ್ಚಿತ. ನಾವು ಸಂತೋಷದಿಂದ ಬಿಜೆಪಿ ಸೆರುವುದು ಉಚಿತ ಎಂದಿದ್ದಾರೆ.



















