ಬೆಂಗಳೂರು: ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರ ಬರ್ಬರ ಹತ್ಯೆ ನಡೆದಿರುವ ಘಟನೆ ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ನಡೆದಿದೆ.
ತಂದೆ-ಮಗನ ಹತ್ಯೆ ನಡೆದಿದ್ದು, ರಿಯಲ್ ಎಸ್ಟೇಟ್ ಸಂಬಂದಿಸಿದಂತೆ ಕೋರ್ಟ್ ಕೇಸಿಗೆ ತೆರಳಿದ್ದಾಗ ಇಬ್ಬರನ್ನೂ ಅಪಹರಿಸಿ ಕೊಲೆ ಮಾಡಲಾಗಿದೆ. ಮೃತರನ್ನು ಮಹದೇವಪುರ ಬಿಜೆಪಿ ಯುವ ಮುಖಂಡ ಮತ್ತು ಉದ್ಯಮಿ ಪ್ರಶಾಂತರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಎಂದು ಗುರುತಿಸಲಾಗಿದೆ. ಕೊಲೆಯಾದ ತಂದೆ ಮಕ್ಕಳು ಮಾಜಿ ಸಚಿವ ಅರವಿಂದ ಲಿಂಬಾವಳಿ ಆಪ್ತರಾಗಿದ್ದರು ಎನ್ನಲಾಗಿದೆ.
ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ.