ಕೊಪ್ಪಳ: ಆರ್‌ಎಸ್‌ಎಸ್ ಹಾಗೂ ನಮಗೆ ತುಂಬಾ ವ್ಯತ್ಯಾಸಗಳಿವೆ. ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿಲ್ಲ. ಅವರಿಗೆ ಹಾಗೂ ನಮಗೆ ಸೈದ್ಧಾಂತಿಕವಾಗಿ ವ್ಯತ್ಯಾಸಗಳಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಾಗೂ ನಮಗೆ ಸೈದ್ಧಾಂತಿಕವಾಗಿ ತುಂಬಾ ವ್ಯತ್ಯಾಸಗಳಿವೆ. ಸ್ವಾತಂತ್ರ್ಯ ಧ್ವಜ ಹಾರಿಸದೆ ಇರುವವರು ಈಗ ಮಾತನಾಡುತ್ತಿದ್ದಾರೆ. ದೇಶ ವಿಭಜನೆಗೆ ಸಾವರ್ಕರ್ ಕಾರಣ ಎಂದು ಆರೋಪಿಸಿದ್ದಾರೆ.
ಮೈಸೂರು ದಸರಾವನ್ನು ಭಾನು ಮುಷ್ತಾಕ್‌ರ ಉದ್ಘಾಟಿಸುವ ವಿಚಾರವಾಗಿ ಮಾತನಾಡಿದ ಅವರು, 2017 ರಲ್ಲಿ ನಿಸಾರ ಅಹ್ಮದ್ ಉದ್ಘಾಟಿಸಿದ್ದರು. ಬಣ್ಣ ಬದಲಾಯಿಸುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಇದೇ ಅವರಿಗೆ ಮುಳುವಾಗಿದೆ ಎಂದಿದ್ದಾರೆ.