ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಎ1 ಆರೋಪಿ ಜಗ್ಗ @ ಜಗದೀಶ್ ನ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಬಿಕ್ಲು ಶಿವನ ಹತ್ಯೆಯಾದ ಕೇವಲ ಹದಿನೈದೇ ನಿಮಿಷಕ್ಕೆ ಜಗ್ಗ ಮನೆಯಿಂದ ಎಸ್ಕೇಪ್ ಆಗಿದ್ದಾನೆ ಎನ್ನುವುದು ಸಿಸಿಟಿವಿ ದೃಶ್ಯಗಳಿಂದ ಬೆಳಕಿಗೆ ಬಂದಿದೆ. ಅಂದು ರಾತ್ರಿ 8 ಗಂಟೆಗೆ ಶಿವಪ್ರಕಾಶ್‌ನ ಕೊಲೆಯಾಗಿದೆ. ರಾತ್ರಿ 8:15 ಗಂಟೆಗೆ ಜಗ್ಗ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ತನ್ನ ಆಡಿ ಕಾರ್ ಮೂಲಕ ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್ಮೆಂಟ್ ನಿಂದ ನೇರ ಚೆನೈಗೆ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಜಗ್ಗ ಮನೆಯಿಂದ ಎಸ್ಕೇಪ್ ಆಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಕರ್ನಾಟಕ ನ್ಯೂಸ್ ಬೀಟ್‌ಗೆ ಲಭ್ಯವಾಗಿದೆ.
ಸದ್ಯ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ಜಗ್ಗನನ್ನು ಪತ್ತೆಹಚ್ಚಲು ತನಿಖಾ ತಂಡ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.