ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು, ಕ್ಯಾಮೆರಾ ಮತ್ತು ಸಿಗ್ನಲ್ಗಳ ಕಣ್ಣು ತಪ್ಪಿಸಿ ಬೈಕ್ ಸವಾರರು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಾರೆ. ಅದರಲ್ಲೂ ನಂಬರ್ ಪ್ಲೇಟ್ಗಳು ಸರಿಯಾಗಿ ಕಾಣಬಾರದು ಎಂದು ಕೆಲ ಪುಂಡರು ಸ್ಟಿಕ್ಕರ್ ಅಂಟಿಸುವುದು, ಕಲರ್ ಹಚ್ಚುವುದು, ಹೀಗೆ ವಿವಿಧ ರೀತಿಯ ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಾರೆ.
ಇದೀಗ ಇಂತಹ ಪುಂಡ ಬೈಕ್ ಸವಾರರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಈಗಾಗಲೇ ನಂಬರ್ ಪ್ಟೇಟ್‌ಗಳಿಗೆ ಸ್ಟಿಕ್ಕರ್ ಅಂಟಿಸಿ ಕಾನೂನು ಉಲಂಘಿಸಿದ 43 ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇನ್ನು ಯಾವ ಪೊಲೀಸ್ ಅಧಿಕಾರಿ ವಾಹನವನ್ನು ತಡೆದು ಪರಿಶೀಲನೆ ಮಾಡುತ್ತಾರೋ ಅವರಿಂದಲೇ ದೂರು ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ. ಬೈಕ್ ಸವಾರರ ಈ ನಡವಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೂ ಭಾರೀ ನಷ್ಟವಾಗುತ್ತಿದ್ದು, ಇದು ಉದ್ದೇಶ ಪೂರಕವಾಗಿಯೇ ಮಾಡಲಾಗುತ್ತಿದ್ದೆ ಎನ್ನಲಾಗಿದೆ.