ಬಳ್ಳಾರಿ: ಖದೀಮರು ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿರುವುದನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡು ಓಡೋಡಿ ಬಂದ ಮಾಲೀಕನ, ಬೈಕ್ ನ್ನೇ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಬಳ್ಳಾರಿ (Ballari) ಜಿಲ್ಲೆ ಸಿರುಗುಪ್ಪ ತಾಲೂಕಿನ ಬಗ್ಗೂರು ಕ್ರಾಸ್ ಬಳಿ ಈ ಘಟನೆ ನಡೆದಿದೆ. ಐವರು ಖದೀಮರು ಬೀಗ ಮುರಿದು ಬೇಕರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬೊಲೆರೊ ಕ್ಯಾಂಪರ್ ನಲ್ಲಿ (Bolero Camper) ಬಂದಿದ್ದ ಐವರು ಕಳ್ಳರು, ಕಬ್ಬಿಣದ ರಾಡ್ ಗಳಿಂದ ಸಿಸಿ ಕ್ಯಾಮೆರಾ (CC Camera) ಧ್ವಂಸ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರು ಬೇಕರಿ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬೇಕರಿ ಮಾಲೀಕ ಮಲ್ಲನಗೌಡ ತನ್ನ ಮೊಬೈಲಿನಲ್ಲಿ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಓಡಿ ಬಂದಿದ್ದಾರೆ.
ಆಗ ಕಳ್ಳರು ಮಲ್ಲನಗೌಡನಿಗೆ ಚಾಕು ತೋರಿಸಿ, ಬೈಕ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.