ಮಂಡ್ಯ : ಗಿಲ್ಲಿ ನಟ ಅವರು ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಕರ್ನಾಟಕದ ಜನರು ಬೆಂಬಲಿಸಿದ್ದರು. ಅದರಂತೆಯೇ ಆಗಿದೆ. ಬಿಗ್‌ಬಾಸ್ 12ರ ಟ್ರೋಫಿ ಈಗ ಗಿಲ್ಲಿನಟನ ಪಾಲಾಗಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅತ್ಯಧಿಕ ವೋಟ್‌ಗಳಿಸಿ ಗಿಲ್ಲಿ ವಿನ್ನರ್ ಆಗಿದ್ದು, 50 ಲಕ್ಷ ರೂ. ನಗದು, 1 ಕಾರ್, ಸುದೀಪ್‌ರಿಂದ 10 ಲಕ್ಷ ರೂ. ಬಹುಮಾನ ಸಿಕ್ಕಿದೆ.
ಬಿಗ್‌ಬಾಸ್ ಗೆದ್ದು ಹುಟ್ಟೂರು ಮಳವಳ್ಳಿಯ ದಡದಪುರಕ್ಕೆ ಹೋದ ಗಿಲ್ಲಿಗೆ ಗ್ರಾಮಸ್ಥರು, ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ಗಿಲ್ಲಿ ನಟನ ಅದ್ಧೂರಿ ಸ್ವಾಗತಕ್ಕೆ ಫ್ಯಾನ್ಸ್ ಪಕ್ಕಾ ಪ್ಲ್ಯಾನ್ ಮಾಡಿದ್ದರು. ಒಂದಲ್ಲ…ಎರಡಲ್ಲ… ಬರೋಬ್ಬರಿ 7 ಕಿಲೋ ಮೀಟರ್ ದೂರದವರೆಗೂ ರೋಡ್ ಶೋ ಆಗಿದೆ. ಈ ಮೂಲಕ ಗಿಲ್ಲಿ ನಟ ತನ್ನೂರಿಗೆ ಹೋಗಿದ್ದಾರೆ. ಮಂಡ್ಯದ ಮಳವಳ್ಳಿಯ ದಂಡಿನ ಮಾರಮ್ಮ ದೇವಸ್ಥಾನದಿಂದ ದಡದಪುರದವರೆಗೆ ಈ ರೋಡ್ ಶೋ ನಡೆದಿದೆ.
ಗಿಲ್ಲಿ ಮಳವಳ್ಳಿಗೆ ಬರ್ತಿದ್ದಂತೆ ಹಾರ, ಕನ್ನಡದ ಶಾಲು ಹಾಕಿ, ಪೇಟ ತೊಡಿಸಿ ಸನ್ಮಾನಿಸಿದ ಅಭಿಮಾನಿಗಳು, ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಶುರು ಮಾಡಿದ್ದಾರೆ. ಕನ್ನಡ ಬಾವುಟ ಹಿಡಿದು ಮೆರವಣಿಗೆ ಹೊರಟ ಗಿಲ್ಲಿ ದಾರಿಯಲ್ಲಿ ಅಲ್ಲಲ್ಲಿ ವಾಹನ ನಿಲ್ಲಿಸಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ ಗಿಲ್ಲಿ. ನಿಜಕ್ಕೂ ಇಷ್ಟೊಂದು ಅಭಿಮಾನ ನೋಡಿ ಸಂತೋಷ ಆಗ್ತಿದೆ ಎಂದಿರೋ ಗಿಲ್ಲಿ. ʻಟಕರೆ ಟಕರೆ ಟಮ್ಟೆ ಏಟು ಮಳವಳ್ಳಿ ಜನ ಅಲ್ಟಿಮೇಟುʼ ಅಂತ ಡೈಲಾಗ್ ಹೊಡೆದು ಅಭಿಮಾನಿಗಳನ್ನ ಖುಷಿಪಡಿಸಿದ್ದಾರೆ.
ನಿನ್ನೆ ಬಿಗ್ ಬಾಸ್ ವಿನ್ನರ್ ಘೋಷಣೆಯಾದ ಬೆನ್ನಲ್ಲೇ ದಡದಪುರದಲ್ಲಿ ಗಿಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಗಿಲ್ಲಿ ಹುಟ್ಟೂರಲ್ಲಿ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ರು. ಗಿಲ್ಲಿ ಬರುವುದು ತಿಳಿಯುತ್ತಿದ್ದಂತೆ ರಸ್ತೆಯುದ್ಧಕ್ಕೂ ಜನಸ್ತೋಮ ನೆರೆದಿತ್ತು. ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳನ್ನೂ ಮೀರಿಸುವಂತೆ ಅಭಿಮಾನಿಗಳ ಸಂಖ್ಯೆ ನೆರೆದಿತ್ತು.
ಇದನ್ನೂ ಓದಿ : ಬಿಗ್‌ಬಾಸ್ ವಿನ್ನರ್ ಗಿಲ್ಲಿ, ರನ್ನರ್ ರಕ್ಷಿತಾ, ಅಶ್ವಿನಿಗೌಡಗೆ ಏನೆಲ್ಲಾ ಬಹಿಮಾನ ಸಿಕ್ಕಿದೆ ಗೊತ್ತಾ?



















