ಇಂದಿನಿಂದ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್-12’ ಶುರುವಾಗ್ತಿದ್ದು, ಟಿವಿ ಫ್ಯಾನ್ಸ್ ಗೆ ಕ್ಷಣಗಣನೆ ಆರಂಭವಾಗಿದೆ. ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲೇ ಸೀಸನ್-12 ಮತ್ತೆ ರಂಗೇರುತ್ತಿದೆ.

ಅಭಿಮಾನಿಗಳ ಒತ್ತಾಯದ ಮೇರೆಗೆ ಸುದೀಪ್ ಮತ್ತೆ ನಿರೂಪಕರಾಗಿ ಮುಂದುವರೆಯಲು ಒಪ್ಪಿಕೊಂಡಿದ್ದಾರೆ. ಕಾಕ್ಕ್ರೋಚ್ ಸುಧೀ, ಮಂಜುಭಾಷಿಣಿ ಹಾಗೂ ರೀಲ್ಸ್ ಮಲ್ಲಮ್ಮ ಹೆಸರುಗಳನ್ನ ರಿವೀಲ್ ಮಾಡಿರೋ ಕಲರ್ಸ್ ಕನ್ನಡ ವಾಹಿನಿ, ಈ ಸಲದ ಆಟ ಕೊಂಚ ಹೊಸದಾಗಿರುತ್ತೆ ಎಂಬ ಸಿಗ್ನಲ್ ಕೊಟ್ಟಿದೆ.

ಮೊದಲ ದಿನದ ಎಪಿಸೋಡ್ ಶೂಟಿಂಗ್ ಮುಗಿಸಿ ಪೋಸ್ಟ್ ಮಾಡಿಕೊಂಡಿರೋ ಸುದೀಪ್, ಸ್ಪರ್ಧೆಗಳು ಈ ಸಲ ಮನರಂಜನೆ ಕೊಟ್ಟೆ ಕೊಡ್ತಾರೆ ಎಂಬ ಕಾನ್ಫಿಡೆನ್ಸ್ ಹರಡಿದ್ದಾರೆ. ಇನ್ನೂ 15 ಸ್ಪರ್ಧಿಗಳು ಯಾರು ಎಂಬ ಕುತೂಹಲ ದೊಡ್ಡದಾಗೆ ಇದೆ. ಪ್ರತಿಸಲವೂ ವಿವಾದಗಳಿಗೆ ದಾರಿ ಮಾಡಿಕೊಡೋ ಬಿಗ್ ಬಾಸ್ ಸ್ಪರ್ಧಿಗಳು, ಈ ಸಲ ಯಾವ ಗೂಗ್ಲಿ ಹಾಕ್ತಾರೆ ಎಂಬುದು ಯಕ್ಷಪ್ರಶ್ನೆಯಾಗೇ ಉಳಿದುಬಿಟ್ಟಿದೆ..!