ಮುಂಬೈ: ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪೆದ್ದಿ ಈಗ ದೊಡ್ಡ ಸದ್ದು ಮಾಡುತ್ತಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಬುಚ್ಚಿ ಬಾಬು ಸನ ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಭಾರೀ ಸದ್ದು ಮಾಡಿದೆ. ಚಿತ್ರತಂಡ ರಾಮನವಮಿ ಪ್ರಯುಕ್ತ ಫಸ್ಟ್ ಝಲಕ್ ರಿಲೀಸ್ ಮಾಡಿದ್ದು, ಜೊತೆಗೆ ಬಿಡುಗಡೆ ದಿನಾಂಕ ಕೂಡ ರಿವೀಲ್ ಮಾಡಲಾಗಿದೆ.
ಪವರ್ ಫುಲ್ ಡೈಲಾಗ್ ಹೊಡೆಯುತ್ತಾ ಸಿಗರೇಟ್ ಬಾಯಲ್ಲಿ ಕಚ್ಚಿಕೊಂಡು ಭರ್ಜರಿ ಆಕ್ಷನ್ ಮಾಡುತ್ತಾ ರಗಡ್ ಲುಕ್ ನಲ್ಲಿ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ರಾಮ್ ಅಬ್ಬರ ನೋಡಿ ಫ್ಯಾನ್ಸ್ ಪೆದ್ದಿ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಚೆರ್ರಿ ಹುಟ್ಟು ಹಬ್ಬದ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಂದಿನ ವರ್ಷದ ಮಾರ್ಚ್ 27ಕ್ಕೆ ಪೆದ್ದಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ರಾಮ್ ಚರಣ್ ಗೆ ಜೋಡಿಯಾಗಿ ಪೆದ್ದಿಯಲ್ಲಿ ಜಾನ್ವಿ ಕಪೂರ್ ಅಭಿನಯಿಸುತ್ತಿದ್ದು, ಕರುನಾಡ ಚಕ್ರವರ್ತಿ ಶಿವರಾಜ ಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ತಾರಾ ಬಳಗದಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ಚಿತ್ರ ತಯಾರಾಗುತ್ತಿದ್ದು, ಎಆರ್ ರೆಹಮಾನ್ ಸಂಗೀತ, ನವೀನ್ ನೂಲಿ ಸಂಕಲನ, ಆರ್ ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.