ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಯುವ ನಾಯಕ ಶುಭಮನ್ ಗಿಲ್ (Shubman Gill) ಅಮೋಘ ಶತಕ, ಕೆ.ಎಲ್. ರಾಹುಲ್, ಉಪನಾಯಕ ರಿಷಭ್, ರವೀಂದ್ರ ಜಡೇಜಾ ಪಂತ್ ಅರ್ಧ ಶತಕಗಳ ನೆರವಿನಿಂದಾಗಿ ಭಾರತ ತಂಡವು 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 608 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ
2ನೇ ದಿನ 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದ ಇಂಗ್ಲೆಂಡ್ 3ನೇ ದಿನ 89.3 ಓವರ್‌ಗಳಲ್ಲಿ 407 ರನ್ ಗಳಿಸಿ ಆಲೌಟ್ ಆಯಿತು. ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 1 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿ 244 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. 4ನೇ ದಿನ ಅಮೋಘ ಪ್ರದರ್ಶನ ತೋರಿ 6 ವಿಕೆಟ್ ಕಳೆದುಕೊಂಡು 427 ರನ್ ಗಳಿಸಿ, ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು.
ಶುಭಮನ್ ಗಿಲ್ 161 ರನ್ (162 ಎಸೆತ, 8 ಸಿಕ್ಸರ್, 13 ಬೌಂಡರಿ) ಗಳಿಸಿದ್ರೆ, ರಿಷಭ್ ಪಂತ್ 65 ರನ್, ರವೀಂದ್ರ ಜಡೇಜಾ ಅಜೇಯ 69 ರನ್, ಕೆ.ಎಲ್ ರಾಹುಲ್ 55 ರನ್, ಜೈಸ್ವಾಲ್ 28 ರನ್, ಕರುಣ್ ನಾಯರ್ 26 ರನ್, ನಿತೀಶ್ ರೆಡ್ಡಿ 1 ರನ್, ವಾಷಿಂಗ್ಟನ್ ಸುಂದರ್ 12 ರನ್ ಗಳಿಸಿದರು.