ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಕೆರೆ ಒತ್ತುವರಿದಾರರಿಗೆ ಜಿಲ್ಲಾಡಳಿತದಿಂದ ಬಿಗ್ ಶಾಕ್ ಎದುರಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ಮಾಡಿದ ಭೂಗಳ್ಳರಿಗೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಈಗ ತೆರವಿಗೆ ಮುಂದಾಗಿವೆ.
ಸದ್ಯದ ಅಂಕಿ- ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಬರೋಬ್ಬರಿ 4,554 ಎಕರೆ ಕೆರೆಯ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. 837 ಕೆರೆಗಳ 4,554 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಗಣ್ಯರು, ಬಿಲ್ಡರ್ ಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಬೆಂಗಳೂರು ಜಿಲ್ಲಾಧಿಕಾರಿ ಕೆರೆ ಒತ್ತುವರಿ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ, ಕೆರೆ ಒತ್ತುವರಿ ತೆರವು ಮಾಡುವುದಾಗಿ ಹೇಳಿದ್ದಾರೆ. ಜಿಲ್ಲಾಡಳಿತ ನಡೆಸಿದ ಸರ್ವೆಯಲ್ಲಿ ಒತ್ತುವರಿ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಬೆಂಗಳೂರು ಉತ್ತರ ವಲಯದ ಯಲಹಂಕದಲ್ಲೇ ಹೆಚ್ಚು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ಎಷ್ಟು ಕೆರೆ ಒತ್ತುವರಿ?
- ಬೆಂಗಳೂರು ಉತ್ತರ-123 ಕೆರೆಯಲ್ಲಿ-1183 ಎಕರೆ ಜಾಗ ಒತ್ತುವರಿ
- ಬೆಂಗಳೂರು ದಕ್ಷಿಣ-179ಕೆರೆಯಲ್ಲಿ 825 ಎಕರೆ ಜಾಗ ಒತ್ತುವರಿ
- ಆನೇಕಲ್-223 ಕೆರೆಯಲ್ಲಿ- 719 ಎಕರೆ ಜಾಗ ಒತ್ತುವರಿ
- ಬೆಂಗಳೂರು ಪೂರ್ವ-100 ಕೆರೆಗಳಲ್ಲಿ-667 ಎಕರೆ ಜಾಗ ಒತ್ತುವರಿ
- ಯಲಹಂಕ-105 ಕೆರೆಯಲ್ಲಿ-1147 ಎಕರೆ ಜಾಗ ಒತ್ತುವರಿ
ನಗರದಲ್ಲಿನ ಒಟ್ಟು 837 ಕೆರೆಗಳಲ್ಲಿ 730 ಕರೆಗಳು ಒತ್ತುವರಿಯಾಗಿದ್ದು, ಪಾಲಿಕೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಒತ್ತುವರಿ ತೆರವಿಗೆ ಮುಂದಾಗಿವೆ.