ಹಾವೇರಿ : ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಗುತ್ತಲ ಸಮೀಪದ ಗುಯಿಲಗುಂದಿ ಗ್ರಾಮದಲ್ಲಿ ರೈತರಿಗೆ ತೀವ್ರ ಆಘಾತ ತಂದ ಘಟನೆ ನಡೆದಿದೆ. ತುಂಗಭದ್ರಾ ನದಿ ತೀರದ ರೈತರ ಪಂಪ್ ಸೆಟ್‌ಗಳ ಕೇಬಲ್‌ಗಳನ್ನು ಕಳ್ಳರು ಕದ್ದು ಕೊಂಡು ಹೋಗಿರುವುದು ಗ್ರಾಾಮದಲ್ಲಿ ಭಾರೀ ಆಕ್ರೋಶ ಮೂಡಿಸಿದೆ.
ರಾತ್ರಿ ವೇಳೆ ಕಾರಿನಲ್ಲಿ ಬಂದು ಕೇಬಲ್‌ಗಳನ್ನು ಕದಿದು ಎಸ್ಕೇಪ್ ಆಗಿದ್ದ ಕಳ್ಳರ ಬಗ್ಗೆ ಸ್ಥಳೀಯರು ಗಂಭೀರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಕೇಬಲ್ ಕಳ್ಳರನ್ನ ಹಿಡಿದು ತೀರ್ಪು ನೀಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಾಯಿಸಿದ್ದಾರೆ.
ಗುತ್ತಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ, ಪೊಲೀಸರು ಅನುಮಾನಾಸ್ಪದ ಕಾರನ್ನು ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬಯಲುಗೊಂಡಿತು. ಆದರೂ, ಕಳ್ಳರು ಈ ಕಾರು ಬಿಟ್ಟು ಪರಾರಿಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಗ್ರಾಮಸ್ಥರು ಕೇಬಲ್ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿರುವುದರಿಂದ, ಪೊಲೀಸರು ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಗುತ್ತಲ ಪೊಲೀಸ್ ಠಾಣೆ ನಡೆಸುತ್ತಿದೆ.
ಇದನ್ನೂ ಓದಿ : ಬಳ್ಳಾರಿ | ಆಂಜನೇಯ ದೇಗುಲದಲ್ಲಿ ಮಾಂಸದ ಮೂಳೆಗಳು ಪತ್ತೆ



















