ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಆರಂಭವಾಗಿದೆ. ಆದರೆ, ಈ ಪಂದ್ಯದಲ್ಲಿ ಬ್ಯಾಟರ್ ಗಳ ವೈಫಲ್ಯ ಎದ್ದು ಕಾಣುತ್ತಿದ್ದು, ರಾಹುಲ್ ಗೆ ಮಹಾ ಮೋಸವಾಗಿದೆ.
ಮೂರನೇ ಅಂಪೈರ್ ನೀಡಿದ ಈ ಕೆಟ್ಟ ತೀರ್ಪಿಗೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬಲಿಯಾದರು. ಆದರೆ ಫೀಲ್ಡ್ ಅಂಪೈರ್ ಔಟ್ ನೀಡದ ಹೊರತಾಗಿಯೂ, ಮೂರನೇ ಅಂಪೈರ್ ನೀಡಿದ ಕೆಟ್ಟ ತೀರ್ಪು ಈಗ ವಿವಾದಕ್ಕೆ ಕಾರಣವಾಗಿದೆ.
ಮಿಚೆಲ್ ಸ್ಟಾರ್ಕ್ ಎಸೆತವನ್ನು ರಾಹುಲ್ ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ರಾಹುಲ್ ಅವರ ಬ್ಯಾಟ್ನ ಸಮೀಪ ಹಾದು ಹೋಗಿ ವಿಕೆಟ್ ಕೀಪರ್ ಕೈಸೇರಿತು. ಆ ಕೂಡಲೇ ಆಸೀಸ್ ಆಟಗಾರರು ರಾಹುಲ್ ವಿಕೆಟ್ಗೆ ಫೀಲ್ಡ್ ಅಂಪೈರ್ ಬಳಿ ಮನವಿ ಮಾಡಿದರು. ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಹೀಗಾಗಿ ಆಸೀಸ್ ಆಟಗಾರರು ರಿವ್ಯೂವ್ ಮೊರೆ ಹೋದರು. ಆಸ್ಟ್ರೇಲಿಯಾದ ಮೇಲ್ಮನವಿ ಪರಿಶೀಲಿಸಿದ ಮೂರನೇ ಅಂಪೈರ್, ಪ್ಯಾಡ್ ಗೆ ಬೌಲ್ ತಾಗಿದ್ದರೂ ಔಟ್ ಎಂದರು.
ಚೆಂಡು ಹಾಗೂ ಬ್ಯಾಟಿನ ನಡುವೆ ಅಂತರವಿರುವುದು ಈಗ ಗಮನಕ್ಕೆ ಬಂದಿದೆ. ಅಂಪೈರ್ ನೀಡಿದ ಈ ವಿವಾದಾತ್ಮಕ ತೀರ್ಪಿಗೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದರು. ಬೇಸರದಿಂದಲೇ ಫೆವಲಿಯನ್ ಸೇರಿದರು.