ಉಡುಪಿ: ವಿಶ್ವ ದಾಖಲೆಗಾಗಿ 7 ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ವಿದುಷಿ ದೀಕ್ಷಾ ವಿ. ಗುರುವಾರ ಸಂಜೆ 5.31ಕ್ಕೆ 170 ಗಂಟೆ ಪ್ರದರ್ಶಿಸಿ ಈ ಹಿಂದಿನ ಮಂಗಳೂರಿನ ರೆಮೋನಾ ಎವೆಟ್ಟೆ ಪೆರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಮೀರಿಸಿದ್ದಾರೆ.
ಆ. 21 ರಂದು ಅಪರಾಹ್ನ 3.30 ಕ್ಕೆ ನೃತ್ಯ ಪ್ರದರ್ಶನ ಆರಂಭವಾಗಿದ್ದು, 9 ದಿನಗಳಲ್ಲಿ 216 ಗಂಟೆ ಪೂರ್ಣಗೊಳಿಸುವ ಗುರಿ ದೀಕ್ಷಾರದ್ದು. ಅವರ 170 ಗಂಟೆಗಳ ಪ್ರದರ್ಶನ ಪೂರ್ಣಗೊಳ್ಳುತ್ತಿದ್ದಂತೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮುಖ್ಯಸ್ಥ ಮನೀಶ್ ವಿಷ್ಟೋಯಿ ಘೋಷಿಸಿದರು. ಬಳಿಕ ಹಲವಾರು ಮಂದಿ ಗಣ್ಯರು ಅಭಿನಂದಿಸಿದರು.