ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅನುಕುಮಾರ್ (Anukumar) ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕೈಯಲ್ಲಿ ದರ್ಶನ್ ನೀಡಿದ್ದ ಭಗವದ್ಗೀತೆ ಹಿಡಿದುಕೊಂಡು ಹೊರ ಬಂದಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿನಿಂದ ಅನುಕುಮಾರ್ ಬಿಡುಗಡೆಯಾಗಿದ್ದಾನವೆ. ಆರೋಪಿ ಅನುಕುಮಾರ್ ಗೆ ಕಳೆದ ಶುಕ್ರವಾರ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ಬೇಲ್ ಶ್ಯೂರಿಟಿ ತಡವಾದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಿದ್ದಾನೆ. ಬಿಡುಗಡೆಯ ನಂತರ ಸಹೋದರನೊಂದಿಗೆ ತೆರಳಿದ್ದಾನೆ. ಆದರೆ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜೈಲಿನಿಂದ ಹೊರ ಬರುವಾಗ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಹೊರಗೆ ಬಂದಿದ್ದಾನೆ. ಜೈಲಿನಲ್ಲಿ ಭಗವದ್ಗೀತೆ ಪುಸ್ತಕ ಓದುತ್ತಾ ಸಮಯ ಕಳೆದಿದ್ದ ಎನ್ನಲಾಗಿದೆ. ದರ್ಶನ್ ಸ್ನೇಹಿತರು ಭಗವದ್ಗೀತೆ ಪುಸ್ತಕವನ್ನು ದಾಸನಿಗೆ ನೀಡಿದ್ದರು. ಆದರೆ, ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ವರ್ಗಾವಣೆಯಾಗುತ್ತಿದ್ದ ಸಂದರ್ಭದಲ್ಲಿ ಅನುಕುಮಾರ್ ಗೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಅದನ್ನು ಜೋಪಾನವಾಗಿಯೇ ಇಟ್ಟುಕೊಂಡಿರುವ ಅನುಕುಮಾರ್ ಕೈಯಲ್ಲೇ ಹಿಡಿದು ಹೊರ ಬಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಜನರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅನುಕುಮಾರ್ ಶ್ಯೂರಿಟಿ ಸಮಸ್ಯೆಯಿಂದ ಬಿಡುಗಡೆಯಾಗುವುದು ತಡವಾಗಿತ್ತು. ಆದರೆ, ಇಂದು ಕೋರ್ಟ್ ನಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದಾರೆ.