ಶಿವಮೊಗ್ಗ: ಸಮಾಜದಲ್ಲಿ ಎಲ್ಲೆಡೆ ಅರಾಜಕತೆ, ಹಿಂಸೆ ತಾಂಡವವಾಡುತ್ತಿದೆ. ʼಭಗವದ್ಗೀತೆ ಅಭಿಯಾನʼದಂತಹ ಕಾರ್ಯಕ್ರಮ ದೇಶಕ್ಕೆ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಇಂದು ಅವಶ್ಯಕವಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯಾದ್ಯಂತ ನಡೆಯುತ್ತಿರುವ 2025ರ ಶ್ರೀ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭದ ಅಂಗವಾಗಿ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಭಗವದ್ಗೀತಾ ಅಭಿಯಾನ- ಮಹಾ ಸಮರ್ಪಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಸಮಾಜ ಸಾಗುತ್ತಿರುವ ದಿಕ್ಕನ್ನು ನಾವೆಲ್ಲಾ ನೋಡುತ್ತಿದ್ದೆವೆ. ಎಲ್ಲೆಡೆ ಅರಾಜಕತೆ, ಹಿಂಸೆ ತಾಂಡವವಾಡುತ್ತಿದೆ. ಹಾಗಾಗಿ, ಈ ರೀತಿ ಕಾರ್ಯಕ್ರಮ ಪ್ರತಿ ಶಾಲೆಯಲ್ಲೂ ನಡೆಯಬೇಕು ಎಂದು ಕರೆ ಕೊಟ್ಟಿದ್ದಾರೆ.
ಸಮಾಜ ವೇಗವಾಗಿ ಬೆಳೆಯುತ್ತಾ ತನ್ನ ಮೂಲವನ್ನು ಮರೆಯುತ್ತಿದೆ. ಸನಾತನ ಧರ್ಮವನ್ನು ಉಳಿಸುವ ಕೆಲಸ ಮಠಗಳಿಂದ ಆಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಬದ್ದತೆಯಿಂದ ಕೆಲಸ ಮಾಡುತ್ತಿದ್ದು, ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣ ಸಂದೇಶ ನೀಡಿದ್ದಾರೆ. ನಮ್ಮ ಕರ್ಮವನ್ನು ನಾವು ನಿರ್ವಹಣೆ ಮಾಡಬೇಕು ಎನ್ನುವುದು ಮುಖ್ಯ ಸಂದೇಶವಾಗಿದೆ ಎಂದಿದ್ದಾರೆ.
ಕಲಿಯುಗದಲ್ಲಿ ಭಗವದ್ಗೀತೆ ಪಾತ್ರ ಮುಖ್ಯವಾಗಿದ್ದು, ಮಕ್ಕಳಿಗೆ ಶಾಲೆಗಳಲ್ಲಿ ರಾಮಯಣ, ಮಹಾಭಾರತದ ಬಗ್ಗೆ ತಿಳಿಸಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಲ್ಲೇ ಸಂಸ್ಕಾರ ಸಿಗಬೇಕು. ಆಗ ಮಾತ್ರ ಸಮಾಜದಲ್ಲಿ ಹಿಂಸೆ ಕಡಿಮೆಯಾಗಿ ಶಾಂತಿ ನೆಲೆಸುತ್ತೇ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿ ಕುರ್ಚಿ ಸಂಘರ್ಷ ಬ್ರೇಕ್ ಮಾಡಿದ್ದಾರೆ | ವಚನಾನಂದ ಸ್ವಾಮೀಜಿ



















