ಬೆಂಗಳೂರು: ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ(social media) ಮರ್ಡರ್(murder) ಮಾಡ್ತೀನಿ ಹುಷಾರ್ ಅಂತಾ ಪೊಲೀಸರಿಗೆ ವಾರ್ನಿಂಗ್(warning) ಮಾಡಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣದ ಮೂಲಕ ತಲ್ವಾರ್ ಫೋಟೋ ಅಪ್ಲೋಡ್(photo upload) ಮಾಡಿರುವ ಆತ, ನನಗೂ ಮರ್ಡರ್ ಮಾಡಲು ಇಷ್ಟ ಇಲ್ಲ. ಆದರೆ, ಊರಲ್ಲಿ ಪರಿಸ್ಥಿತಿ ಹಾಗಿದೆ. ಎಫ್ ಐಆರ್ (FIR)ದಾಖಲು ಮಾಡಿಕೊಳ್ಳಿ. ಇಲ್ಲವಾದರೆ ಮರ್ಡರ್ ಮಾಡ್ತೀನಿ ಎಂದು ತಲ್ವಾರ್ ಫೋಟೋ ಅಪ್ಲೋಡ್ ಮಾಡಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾನೆ.
ನನ್ನ ಅಪ್ಪ- ಅಮ್ಮ ಪೊಲೀಸ್ ಠಾಣೆಗೆ(POLICE STATION) ಅಲೆದು ಸಾಕಾಗಿದೆ. ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ FIR ತಗೊಳಿ. ಇಲ್ಲ ಅಂದ್ರೆ ಇದೇ ತಲ್ವಾರ್ ಅಲ್ಲಿ ಮರ್ಡರ್ ಮಾಡ್ತೀನಿ ಅಂತ ವಾರ್ನಿಂಗ್ ಮಾಡಿದ್ದಾನೆ.
ಮನೆ ಕಟ್ಟಲು ನಮಗೆ ಪದೇ ಪದೇ ಕಿರಿಕಿರಿ ಮಾಡುತ್ತಿದ್ದಾರೆ. ದಾಖಲೆಗಳೆಲ್ಲ ಸರಿ ಇದ್ದರೂ ಸುಖಾ ಸುಮ್ಮನೆ ಹಿಂಸಿಸಲಾಗುತ್ತಿದೆ. ಪೊಲೀಸ್ ಠಾಣೆ ಮೆಟ್ಟಿಲು ಏರಿದರೆ, ಎಂಎಲ್ ಎ, ಎಂಪಿ ಕಡೆಯಿಂದ ಕಾಲ್ ಮಾಡಿಸುತ್ತಾರೆ. ಪ್ರಭಾವಕ್ಕೆ ಒಳಗಾಗಿ ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ.
ಇದೇ ಕಾರಣಕ್ಕೆ ಮರ್ಡರ್ ಮಾಡದೇ ಬೇರೆ ಆಯ್ಕೆ ಇಲ್ಲ ಎಂದು ನೊಂದು ಆತ ಪೋಸ್ಟ್ ಮಾಡಿದ್ದಾನೆ. ಯಾದಗಿರಿಯ ಕೊಡೇಕಲ್ ಮೂಲದ ವ್ಯಕ್ತಿಯಿಂದ ಈ ರೀತಿ ಪೋಸ್ಟ್ (post)ಮಾಡಲಾಗಿದೆ. ಈ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ನ್ಯಾಯಕ್ಕೆ ಆಗ್ರಹ ಮಾಡಿದ್ದಾನೆ.