ಬೆಂಗಳೂರು : ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಚಕ್ರಕ್ಕೆ ಸಿಲುಕಿ 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಸರ್ಜಾಪುರ ರಸ್ತೆಯ ಕೊಡತಿಯಲ್ಲಿ ನಡೆದಿದೆ.
ಕುಶಾಲ್ ಮೃತಪಟ್ಟ ಬಾಲಕ. ವಾಟರ್ ಟ್ಯಾಂಕರ್ ಕೊಡತಿ ಗೇಟ್ ನಿಂದ ಕೊಡತಿ ಗ್ರಾಮಕ್ಕೆ ತೆರುಳುತ್ತಿತ್ತು. ಅದೇ ವೇಳೆ ಕುಶಾಲ್ ಬೈಕ್ ನಲ್ಲಿ ಸ್ನೇಹಿತನ ಜೊತೆ ಬರುತ್ತಿದ್ದನು. ವಾಟರ್ ಟ್ಯಾಂಕರ್ ಗೆ ಬಲಬದಿಯಿಂದ ಓವರ್ ಟೇಕ್ ಮಾಡುವಾಗ ದುರಂತ ಸಂಭವಿಸಿದೆ.
ಬೈಕ್ ಸವಾರನು ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ಕೆಳಗಡೆ ಬೀಳುವಂತಾಯಿತು. ಆಗ ಬೈಕ್ ಸವಾರ ಬಲಕ್ಕೆ ಜಂಪ್ ಆಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಡಭಾಗಕ್ಕೆ ಬಿದ್ದ ಕುಶಾಲ್ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಇದೀಗ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ನುಗ್ಗಿದ ಖತರ್ನಾಕ್ ದಂಪತಿ | ಮನೆಯೊಡತಿ ಕೈ ಕಾಲು ಕಟ್ಟಿ ಚಿನ್ನಾಭರಣ ದರೋಡೆ



















