ಬೆಳಗಾವಿ | ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿಯೊಂದು ಹರಿದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದ ಸಿಗ್ನಲ್‌ನಲ್ಲಿ ವೃದ್ಧನೋರ್ವ ಭಿಕ್ಷೆ ಬೇಡುತ್ತಾ ರಸ್ತೆ ದಾಡುತ್ತಿದ್ದಾಗ ಲಾರಿ ಚಾಲಕನೋರ್ವ ಲಾರಿಯನ್ನು ಮುಂದೆ ಚಲಾಯಿಸಿದ ಪರಿಣಾಮ ಭಿಕ್ಷುಕ ವೃದ್ದ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಅಲ್ಲಿಯೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಬೆಳಗಾವಿ ಉತ್ತರ ಸಂಚಾರಿ ಪೊಲೀಸರು ಅಪಘಾತ ಮಾಡಿದ ಲಾರಿ, ಲಾರಿ ಚಾಲಕನನ್ನ ವಶಕ್ಕೆ ಪಡೆದಿದ್ದು, ಅಪರಿಚಿತ ಭಿಕ್ಷುನ ಗುರುತು ಪತ್ತೆ ಹಚ್ಚುತ್ತಿದ್ದಾರೆ.
ಇದನ್ನೂ ಓದಿ : ಟರ್ಕಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ | ಹಲವು ಕಟ್ಟಡಗಳು ನೆಲಸಮ.. 22ಕ್ಕೂ ಹೆಚ್ಚು ಮಂದಿಗೆ ಗಾಯ!



















