ಬೆಳಗಾವಿ : ಡಿಸೆಂಬರ್ 9 ರಂದು ಅನ್ನದಾತರಿಗಾಗಿ ಬಿಜೆಪಿ ನಾಯಕರಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆ ಮೂಲಕ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದೆ.
ಕಬ್ಬು ಬೆಳೆಗಾರರ ಸಮಸ್ಯೆ, ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ಬೆಳೆಗಳಿಗೆ ಸಿಗದ ಪರಿಹಾರ, ಮೆಕ್ಕೆಜೋಳ ಬೆಲೆ ಕುಸಿತ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಡು ಪ್ರತಿಭಟನೆ ಮಾಡಲಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ನಾಯಕರ ಭೇಟಿ ಮತ್ತು ಪರಿಶೀಲನೆ ಮಾಡಿದ್ದು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್ ರವಿ ಕುಮಾರ್ ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಅಧ್ಯಕ್ಷರಾದ ಸುಭಾಷ್ ಪಾಟೀಲ್ ಹಾಗೂ ಪಕ್ಷದ ಮುಖಂಡರಿಂದ ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಹವಾಯಿಯಲ್ಲಿ ಡೆಡ್ಲಿ ಜ್ವಾಲಾಮುಖಿ | 20 ಸೆಕೆಂಡ್‌ನಲ್ಲಿ ಸಾವಿರ ಅಡಿ ಎತ್ತರಕ್ಕೆ ಚಿಮ್ಮಿದ ಲಾವ



















