ಬೀಜಿಂಗ್: ಚೀನಾದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪಾಕ್ ಪ್ರಧಾನಿ ಭಾರತದಂತೆ ನಮ್ಮೊಂದಿಗೆ ಸ್ನೇಹಮಯವಾಗಿ ಇರುವಂತೆ ಮನವಿ ಮಾಡಿದ್ದಾರೆ.
ದ್ವಿಪಕ್ಷೀಯ ಮಾತುಕತೆಯಲ್ಲೂ ಭಾರತ ಮತ್ತು ರಷ್ಯಾ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಾತುಗಳನ್ನಾಡಿದ್ದರು. ಪುಟಿನ್ ಹಾಗೂ ಮೋದಿ ಒಂದೇ ಕಾರಿನಲ್ಲಿ ಪ್ರಯಾಣಿಸುವುದರ ಮೂಲಕ ವಿರೋಧಿ ಬಣಕ್ಕೆ ಟಾಂಗ್ ಕೊಟ್ಟಿದ್ದರು. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪಾಕ್ ಪ್ರಧಾನಿಗೆ ಗುನ್ನ ನೀಡಿದ್ದರು. ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪುಟಿನ್ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಈಗ ಪಾಕ್ ಪ್ರಧಾನಿ, ಶೆಹಬಾಜ್ ಷರೀಫ್ ಆಡಿರುವ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಕಷ್ಟದ ಸಂದರ್ಭದಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ನಿಂತ ತಮಗೆ ಧನ್ಯವಾದ. ನಾವು ರಷ್ಯಾ ಹಾಗೂ ಭಾರತದ ನಡುವಿನ ಸಂಬಂಧಗಳನ್ನು ಗೌರವಿಸುತ್ತೇವೆ. ಆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ಆದರೆ, ನಾವು ಕೂಡ ರಷ್ಯಾದೊಂದಿಗೆ ಅದೇ ರೀತಿಯ ಉತ್ತಮ ಬಾಂಧವ್ಯ ಹೊಂದಲು, ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಬಯಸುತ್ತೇವೆ” ಎಂದು ಪಾಕಿ ಪ್ರಧಾನಿ ಹೇಳಿರುವ ಮಾತು ಈಗ ವೈರಲ್ ಆಗುತ್ತಿದೆ.