ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ಇ ಖಾತಾ ಪಡೆದವರಿಗೆ ಶಾಕ್ ಎದುರಾಗಿದೆ. ಒಂದು ವೇಳೆ ಅಕ್ರಮವಾಗಿ ಇ ಖಾತಾ ಮಾಡಿಸಿಕೊಂಡರೆ ಅವುಗಳನ್ನು ಹುಡುಕಿ ರದ್ದು ಮಾಡಲು ಪಾಲಿಕೆ ಮುಂದಾಗಿದೆ. ಪಾಲಿಕೆ ಅಧಿಕಾರಿಗಳೊಂದಿಗೆ ಅಡ್ಜೆಸ್ಟ್ ಮೆಂಟ್ ಮೂಲಕ ಎ ಖಾತಾ ಮಾಡಿಸಿಕೊಂಡ ಸ್ವತ್ತುಗಳಿಗೆ ಈಗ ಕುತ್ತು ಶುರುವಾಗಿದೆ. ಈಗ ಪಾಲಿಕೆ ಕಚೇರಿಯಲ್ಲಿ ನಮೂನೆ ಎ ನಲ್ಲಿ ಅನಧಿಕೃತವಾಗಿ ದಾಖಲಾಗಿರುವ ಸ್ವತ್ತುಗಳನ್ನು ರದ್ದು ಪಡಿಸಲು ಪಾಲಿಕೆ ಮುಂದಾಗಿದೆ.
ಸದ್ಯದ ಮಾಹಿತಿಯಂತೆ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಎ ಖಾತಾ ಪಡೆದ ಸ್ವತ್ತುಗಳು 9736 ಎನ್ನಲಾಗಿದೆ. ಇವುಗಳಿಗೆ ಸ್ವತಃ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿಗಳು ಲಂಚ ಪಡೆದು ಅನಧಿಕೃತವಾಗಿ ಎ ಖಾತಾ ಮಾಡಿಸಿಕೊಟ್ಟಿದ್ದರು. ಹೀಗಾಗಿ ಈ ಕ್ರಮದಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿತ್ತು. ಹೀಗಾಗಿ ಇಂತಹ ಖಾತಾಗಳನ್ನು ರದ್ದು ಮಾಡಲು ಈಗ ಪಾಲಿಕೆ ಮುಂತಾಗಿದೆ.