ಅನಧಿಕೃತ ಪಿಜಿಗಳ ಮೇಲೆ ಬಿಬಿಎಂಪಿ ಸಮರ ಸಾರಿದೆ.
ಕೆಲವು ಪಿಜಿಗಳಿಂದ ನೆರೆಹೊರೆಯವರಿಗೆ ಮುಜುಗರ ಉಂಟಾಗುತ್ತಿದ್ದು, ಬಿಬಿಎಂಪಿ ಸಮರ ಸಾರಿದೆ. ಇಲ್ಲಿಯ ಹೆಚ್ ಎಸ್ ಅರ್ ಲೇಔಟ್ ಪಿಜಿಯಲ್ಲಿ ವಾಸ ಮಾಡುವ ಹೆಣ್ಣು ಮಕ್ಕಳು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದರು. ಯುವತಿ ಬೆತ್ತಲೆ ಒಡಾಟ ನಡೆಸುತ್ತಿರುವುದರಿಂದ ಮುಜುಗರ ಉಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪಿಜಿ ನಡೆಸುವವರು ನೆರೆಹೊರೆಯವರಿಗೆ ಮುಜುಗರ, ತೊಂದರೆಯಾಗದಂತೆ ಪಿಜಿ ನಡೆಸಬೇಕು ಎಂದು ಖಡಕ್ ಆಗಿ ಬಿಬಿಎಂಪಿ ಸೂಚಿಸಿದೆ.
ನಗರದಲ್ಲಿ ಈಗಾಗಲೇ 1200 ಅನಧಿಕೃತ ಪಿಜಿಗಳನ್ನು ಬಿಬಿಎಂಪಿ ಗುರುತಿಸಿದೆ. ಆರೋಗ್ಯ ಇಲಾಖೆ 200 ಪಿಜಿಗಳನ್ನು ಬಂದ್ ಮಾಡಿದೆ. ಇನ್ನುಳಿದ ಪಿಜಿಗಳಿಗೆ ಪರವಾನಿಗೆ ಪಡೆಯದಿದ್ದರೆ ಬಂದ್ ಮಾಡಿಸುವ ಎಚ್ಚರಿಕೆ ನೀಡಲಾಗಿದೆ.