ಬೆಂಗಳೂರು: ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿ 7 ಹೋಳಾಗಲಿದೆಯೇ? ಎಂಬ ಅನುಮಾನವೊಂದು ಈಗ ಕಾಡುತ್ತಿದೆ.
ಇಂದು ವಿಧಾನಸಭಾ ಸ್ಪೀಕರ್ ಗೆ ಗ್ರೇಟರ್ ಬೆಂಗಳೂರು ವರದಿ ಸಲ್ಲಿಕೆಯಾಗಲಿದೆ. ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ವರದಿ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಪ್ರತಿ ಪಾಲಿಕೆಗೆ 100 ರಿಂದ 120 ವಾರ್ಡ್ ಗಳಂತೆ ಏಳು ಪಾಲಿಕೆ ರಚಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಹೊರಭಾಗದ ಗ್ರಾಮ ಪಂಚಾಯಿತಿಗಳನ್ನು ಕೂಡ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದ್ದು, ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯಿಂದ ವರದಿ ಸಿದ್ಧ ಪಡಿಸಿದೆ.
100 ರಿಂದ 125 ವಾರ್ಡ್ ಗೆ ಒಂದರಂತೆ 7 ಪಾಲಿಕೆ ರಚಿಸಲು ಶಿಫಾರಸು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ವಿಧಾನಸಭೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಸೂಚನೆ ಮೇರೆಗೆ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಪರಿಶೀಲನಾ ಜಂಟಿ ಸಮಿತಿ ರಚಿಸಲಾಗಿತ್ತು.
ಈಗ ಪರಿಶೀಲಿಸಿದ ನಂತರ ವರದಿ ಸಲ್ಲಿಸಲು ಸಮಿತಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಸಲಿದೆ. ಈ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲಾಗುವುದು ಎಂದು ಶಾಸಕ ಹಾಗೂ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಪರಿಶೀಲನ ಸಮಿತಿ ವರದಿಯಲ್ಲಿರುವ ಮುಖ್ಯ ಅಂಶಗಳು ಏನು?
- ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಗರಿಷ್ಠ 7 ಪಾಲಿಕೆ ಇರಬೇಕು
- ವಾರ್ಡ್ ಸಂಖ್ಯೆ ಚಿಕ್ಕದಾಗಿರಬೇಕು
- ಪ್ರತಿ ಪಾಲಿಕೆಯ ವಾರ್ಡ್ ಸಂಖ್ಯೆ 100 ರಿಂದ 125 ಇರಬೇಕು
- ಸ್ಥಳೀಯ ಮಟ್ಟದಲ್ಲಿ ಇಲಾಖೆಗಳ ನಡುವೆ ಸಮನ್ವಯ ಸಮಿತಿ ರಚನೆ
- ಭ್ರಷ್ಟಾಚಾರ ತಡೆಗೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ವಿಚಕ್ಷಣಾ ದಳ ಸ್ಥಾಪನೆ