ಬೆಂಗಳೂರು: ನಗರದಲ್ಲಿ ಇಷ್ಟು ದಿನ ನೀರು ಬಂದಿಲ್ಲ, ಬೋರ್ ವೆಲ್ ಹಾಕಿಲ್ಲ, ಆರ್ ಓ ಪ್ಲಾಂಟ್ ಗೆ ನೀರು ಬರುತ್ತಿಲ್ಲ ಎಂಬೆಲ್ಲ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ಬಿಬಿಎಂಪಿ ಅಧಿಕಾರಿಗಳು ಸುಸ್ತಾಗಿ ಹೋಗುತ್ತಿದ್ದರು. ಆದರೆ, ಈಗ ಬಿಬಿಎಂಪಿ ಈ ಜವಾಬ್ದಾರಿಯಿಂದ ಮುಕ್ತಿ ಪಡೆಯುತ್ತಿದೆ.
ಬೆಂಗಳೂರು ಸೇರಿದಂತೆ ಬೆಂಗಳೂರಿನ ಹೊರ ವಲಯಗಳಿಗೆ ಬಿಬಿಎಂಪಿ ನೀರು ಪೂರೈಕೆ ಮಾಡುತ್ತಿತ್ತು. ಆದರೆ, ಏಪ್ರಿಲ್ 1 ರಿಂದ ಬೆಂಗಳೂರಿನ ಸಂಪೂರ್ಣ ನೀರಿನ ಜವಬ್ದಾರಿಯನ್ನು ಜಲಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಬಿಬಿಎಂಪಿ ಅಂಡರ್ ನಲ್ಲಿರುವ ಎಲ್ಲ ಬೋರ್ ವೆಲ್ ಗಳನ್ನು ಬಿಡಬ್ಲೂಯುಎಸ್ ಎಸ್ ಬಿಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ಕೀಮ್ ಗಳಲ್ಲಿ ಬರುವ ಅನುದಾನವನ್ನು ಸಹ BWSSB ಗೆ ಹಸ್ತಾಂತರ ಮಾಡಲಾಗುತ್ತಿದೆ. ಏಪ್ರಿಲ್ ಒಂದರಿಂದ ಆರ್ ಓ ಪ್ಲಾಂಟ್ ಗಳು ಸಹ ಜಲ ಮಂಡಳಿಗೆ ಹಸ್ತಾಂತರವಾಗಲಿವೆ. ಬೋರ್ ವೆಲ್ ಬತ್ತಿ ಹೋದರೂ ಟ್ಯಾಕಂರ್ ಮೂಲಕ RO ಪ್ಲಾಂಟ್ ಗಳಿಗೂ ಜಲ ಮಂಡಳಿ ನೀರು ಪೂರೈಸಬೇಕು.
ಒಂದು ವೇಳೆ ಮಾರ್ಚ್ ಒಳಗೆ ನೀರಿನ ಸಮಸ್ಯೆ ಉಂಟಾದರೆ, ಬಿಬಿಎಂಪಿ ನಿರ್ವಹಣೆ ಮಾಡಲಿದೆ. ಏಪ್ರಿಲ್ 1 ರಿಂದ ನೀರು ಸರಬರಾಜು ಕಾರ್ಯವನ್ನು ಜಲಂಡಳಿಗೆ ತೆಕ್ಕೆಗೆ ವಹಿಸಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.