ಸ್ಯಾಂಡಲ್‌ವುಡ್‌ನ ಹೆಸರಾಂತ ಕಲಾವಿದ ಬ್ಯಾಂಕ್ ಜನಾರ್ದನ್ ಇಹಲೋಕ ತ್ಯಜಿಸಿದ್ದಾರೆ.
ಅವರ ವೃತ್ತಿ ಬದುಕನ್ನು ಒಮ್ಮೆ ಮೆಲುಕು ಹಾಕಿದ್ರೆ, ಪ್ರಖ್ಯಾತಿಗಳಿಸಿರುವ ನಟರ ಜೊತೆಗೆ ಬ್ಯಾಂಕ್ ಜನಾರ್ದನ್ ಸ್ಕ್ರೀನ್ ಶೇರ್ ಮಾಡಿರುವುದು ಗೊತ್ತಾಗುತ್ತದೆ. ನಟರಾದ ಶಂಕರ್ ನಾಗ್, ಅನಂತ್ ನಾಗ್, ಟೈಗರ್ ಪ್ರಭಾಕರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವಣ್ಣ, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‍ಕುಮಾರ್, ವಿಜಯ್ ರಾಘವೇಂದ್ರ, ಸುದೀಪ್, ದರ್ಶನ್, ಗಣೇಶ್ ಸೇರಿದಂತೆ ಎಲ್ಲಾ ನಟರ ಜೊತೆಗೆ ಬ್ಯಾಂಕ್ ಜನಾರ್ದನ್ ನಟಿಸಿದ್ದಾರೆ.



















