ಬೆಂಗಳೂರು : ಬ್ಯಾಂಕ್ ಖಾತೆಯಲ್ಲಿ ಸಾವಿರಾರು, ಲಕ್ಷಾಂತರ ರೂಪಾಯಿ ಇದೆ. ಹಾಗಾಗಿ, ಬ್ಯಾಂಕ್ನವರು ನಮ್ಮ ಬ್ಯಾಂಕ್ ಖಾತೆಯನ್ನು ಯಾವುದೇ ಕಾರಣಕ್ಕೂ ಬ್ಲಾಕ್ ಮಾಡುವುದಿಲ್ಲ ಎಂಬ ವಿಶ್ವಾಸ ತುಂಬ ಜನರದ್ದಾಗಿರುತ್ತದೆ. ಆದರೆ, ಬ್ಯಾಂಕ್ಗಳು ಗ್ರಾಹಕರ ಖಾತೆಯಲ್ಲಿ ದುಡ್ಡಿದ್ದರೂ ಕೆಲವೊಂದು ಕಾರಣಗಳಿಂದ ಖಾತೆಗಳನ್ನು ಬ್ಲಾಕ್ ಅಥವಾ ಫ್ರೀಜ್ ಮಾಡುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಖಾತೆದಾರರು ಜಾಗ್ರತರಾಗಿ ಇರಬೇಕಾಗುತ್ತದೆ.
ಹೌದು, ಹಲವು ಕಾರಣಗಳಿಂದಾಗಿ ಬ್ಯಾಂಕ್ಗಳು ಖಾತೆಗಳನ್ನು ಬ್ಲಾಕ್ ಮಾಡುತ್ತವೆ. ಅದರಲ್ಲೂ, ಗ್ರಾಹಕರು ಇ-ಕೆವೈಸಿ ಮಾಡಿಸಿರದಿದ್ದರೆ, ಪ್ಯಾನ್ ಕಾರ್ಡ್ ಸರಿಯಾಗಿ ಲಿಂಕ್ ಆಗಿರದಿದ್ದರೆ, ಆಧಾರ್ ರಿ-ವೇರಿಫಿಕೇಶನ್ ಬಾಕಿ ಇದ್ದರೆ ಅಥವಾ ಬದಲಾಗಿರುವ ವಿಳಾಸವನ್ನು ಅಪ್ಡೇಟ್ ಮಾಡದಿದ್ದರೆ ಬ್ಯಾಂಕ್ಗಳು ಖಾತೆಗಳನ್ನು ಬ್ಲಾಕ್ ಮಾಡುತ್ತವೆ.
ಇದಕ್ಕಾಗಿ ಗ್ರಾಹಕರು, ನಿಯಮಿತವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪ್ಯಾನ್ ಕಾರ್ಡ್ ಅನ್ನು ಸರಿಯಾಗಿ ಲಿಂಕ್ ಮಾಡಬೇಕು. ಆಧಾರ್ ರಿ-ವೇರಿಫಿಕೇಶನ್ ಬಾಕಿ ಇದ್ದರೆ, ಮೊದಲು ಅದನ್ನು ಪೂರ್ಣಗೊಳಿಸಬೇಕು. ನೀವು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿದ್ದರೆ, ಸರಿಯಾದ ವಿಳಾಸವನ್ನು ಅಪ್ಡೇಟ್ ಮಾಡಬೇಕು.
ಬ್ಯಾಂಕ್ ಗಳು ಸಾಮಾನ್ಯವಾಗಿ 10 ವರ್ಷದ ಬಳಿಕ ಇ-ಕೆವೈಸಿ ಪ್ರಕ್ರಿಯೆಯನ್ನು ಮತ್ತೆ ಮಾಡುವಂತೆ ಸೂಚಿಸುತ್ತವೆ. ಇತ್ತೀಚೆಗೆ ಜನಧನ್ ಖಾತೆಗಳಿಗೆ ಇ-ಕೆವೈಸಿ ಪೂರ್ಣಗೊಳಿಸಲು ಆದೇಶಿಸಲಾಗಿತ್ತು. ಅದರಂತೆ, ನಿಮ್ಮ ಖಾತೆಯ ಇ-ಕೆವೈಸಿ ಅಥವಾ ಸಾಮಾನ್ಯ ಕೆವೈಸಿ ಬಾಕಿ ಇದ್ದರೆ ಅದನ್ನು ಪೂರ್ಣಗೊಳಿಸಬೇಕು. ಬ್ಯಾಂಕುಗಳು ಕೇಳುವ ದಾಖಲೆಗಳನ್ನು ನೀಡುವ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಯಾಂಕ್ ಗಳು ಬ್ಲಾಕ್ ಮಾಡುತ್ತವೆ ಎಂಬುದು ಗಮನದಲ್ಲಿರಲಿ.
ಇದನ್ನೂ ಓದಿ : ಸಚಿವ ಮಂಕಾಳ ವೈದ್ಯ ವಿರುದ್ಧ ಸತೀಶ್ ಸೈಲ್ ಅಸಮಾಧಾನ.. ಕೆಡಿಪಿ ಸಭೆಯಿಂದಲೇ ಹೊರನಡೆದ ಶಾಸಕ!



















