ಚಿಕ್ಕಮಗಳೂರು : ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ಮೀರಿ ಬಂಡಾಜೆ ಜಲಪಾತ ಭೋರ್ಗರೆಯುತ್ತಿದೆ.
ಸಾವಿರಾರು ಅಡಿ ಎತ್ತರದ ಚಾರ್ಮಾಡಿ ಘಾಟಿಯ ಅರಣ್ಯದಲ್ಲಿ ಭೋರ್ಗರೆಯುತ್ತಿರುವ ಬಂಡಾಜೆ ಜಲಪಾತದಲ್ಲಿ ಪ್ರವಾಸಿಗರು ಮೈಮರೆತು ಹುಚ್ಚಾಟ ಮಾಡುತ್ತಿದ್ದು, ತಮ್ಮ ಮೇಲೆ ಸ್ವಲ್ಪ ನಿಯಂತ್ರಣ ತಪ್ಪಿದರೂ ಸಾವಿರಾರು ಅಡಿಯಿಂದ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದೆ.
ಮೂಡಿಗೆರೆ ತಾಲೂಕಿನ ರಾಣಿಝರಿ ಮೂಲಕ ಟ್ರಕಿಂಗ್ ಗಾಗಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅಪಾಯಕಾರಿ ಸ್ಥಳಕ್ಕೆ ಮಳೆಗಾಲದಲ್ಲಿ ಟ್ರಕ್ಕಿಂಗ್‌ಗೆ ಅವಕಾಶ ನೀಡಿದ ಚಿಕ್ಕಮಗಳೂರು ಅರಣ್ಯ ಇಲಾಖೆಯ ವಿರುದ್ಧ ಅಪಸ್ವರ ಕೇಳಿ ಬರುತ್ತಿದೆ.
ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಣಿಝರಿ, ಬಂಡಾಜೆ ಫಾಲ್ಸ್ ಟ್ರಕ್ಕಿಂಗ್ ನಿಷೇಧಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.



















