ಬಳ್ಳಾರಿ : ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ಐದು ದಿನಗಳ ನಂತರ ಬಾಂಬ್ ನಿಷ್ಕ್ರಿಯ ದಳ ಹಾಗೂ ಸೋಕೋ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಘಟನೆಯ ತನಿಖೆಯ ಭಾಗವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕ ವಿಶೇಷ ತಂಡಗಳು ಬಳ್ಳಾರಿಗೆ ಆಗಮಿಸಿದ್ದು, ಫೈರಿಂಗ್ ನಡೆದ ಸ್ಥಳದ ಜೊತೆಗೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.
ಜನಾರ್ದನ ರೆಡ್ಡಿ ನಿವಾಸದ ಸುತ್ತಮುತ್ತಲ ಪ್ರದೇಶದಲ್ಲಿ ಪರಿಶೀಲನೆ ವೇಳೆ ಬಾಂಬ್ ನಿಷ್ಕ್ರಿಯ ದಳ ಮತ್ತೊಂದು ಬುಲೆಟ್ ಪತ್ತೆ ಹಚ್ಚಿದೆ. 9 ಎಂಎಂ ಬುಲೆಟ್ ಪತ್ತೆಯಾಗಿದೆ.
ಬುಲೆಟ್ ಪತ್ತೆ ಹಚ್ಚುವ ಮಷಿನ್ ಮೂಲಕ ಬುಲೆಟ್ ಪತ್ತೆ ಮಾಡಲಾಗಿದೆ. ಬುಲೆಟ್ ಸಿಕ್ಕ ಜಾಗವನ್ನು ಮಾರ್ಕ್ ಮಾಡಿ ಬುಲೆಟ್‌ನ ಫೋಟೋ ಚಿತ್ರೀಕರಣ ಮಾಡಲಾಗಿದೆ. ಬುಲೆಟ್ ಪತ್ತೆಯಾದ ಸ್ಥಳ ಹಾಗೂ ರಸ್ತೆಗಿರುವ ಬ್ಯಾರಿಕೇಡ್‌ನಿಂದ ಅಧಿಕಾರಿಗಳು ಅಳತೆ ಮಾಡಿದ್ದಾರೆ. ಬುಲೆಟ್ ಎಷ್ಟು ದೂರದಿಂದ ಹಾರಿದೆ ಅಂತಾ ತನಿಖೆ ನಡೆಸಿದ್ದಾರೆ. ಸದ್ಯ ಸಿಕ್ಕಿರುವ ಬುಲೆಟ್ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಬಿಬಿಎಲ್ ಪದಾರ್ಪಣೆಯಲ್ಲೇ ಮಿಂಚಿದ ತಬ್ರೈಜ್ ಶಮ್ಸಿ | ಮೈದಾನದಲ್ಲೇ ‘ಶೂ ಕಾಲ್’ ಮಾಡಿ ಸಂಭ್ರಮಿಸಿದ ಸ್ಪಿನ್ನರ್!



















