ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಎಂದಿಗೂ ಹಲವಾರು ದಾಖಲೆಗಳ ಸೃಷ್ಟಿಗೆ ವೇದಿಕೆ. ಅಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.
ಪಾಕಿಸ್ತಾನ ಪರ ಐಸಿಸಿ ಟೂರ್ನಿಯಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಮೂರನೇ ಹಾಗೂ ಅತಿ ವೇಗವಾಗಿ ಈ ಸಾಧನೆಗೈದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಕವರ್ ಕಡಡೆ ಬೌಂಡರಿಗೆ ಬಾರಿಸಿದ ಅಜಂ ತಮ್ಮ 24ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅದ್ಭುತ ಬ್ಯಾಟರ್ ಎಂಬುದನ್ನು ಸಾಬೀತುಮಾಡಿ ತೋರಿಸಿದ್ದಾರೆ. ಆದಾಗ್ಯೂ ಬಾಬರ್ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. 26 ಎಸೆತಗಳಿಂದ 23 ರನ್ ಗಳಿಸಿದರು.
ಐಸಿಸಿ ಏಕದಿನದಲ್ಲಿ ಪಾಕ್ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್
ಸಯೀದ್ ಅನ್ವರ್ – 25 ಇನ್ನಿಂಗ್ಸ್‌ಗಳಲ್ಲಿ 1204 ರನ್
ಜಾವೇದ್ ಮಿಯಾಂದಾದ್ – 30 ಇನ್ನಿಂಗ್ಸ್‌ಗಳಲ್ಲಿ 1083 ರನ್
ಬಾಬರ್ ಅಜಮ್ – 24 ಇನ್ನಿಂಗ್ಸ್‌ಗಳಲ್ಲಿ 1005 ರನ್
241 ರನ್ಗಳಿಗೆ ಆಲ್ಔಟ್
ಪಂದ್ಯದಲ್ಲಿ ಪಾಕಿಸ್ತಾನ ತಂಡ ಸ್ಪರ್ಧಾತ್ಮಕ 241 ರನ್ ಬಾರಿಸಿ ಭಾರತಕ್ಕೆ ಸವೋಲೊಡ್ಡಿತು. ಪಾಕಿಸ್ತಾನ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್(62) ಬಾರಿಸಿದ ಅರ್ಧಶತಕ ಮತ್ತು ಭಾರತ ಪರ ಕುಲ್‌ದೀಪ್ ಯಾದವ್ 3 ವಿಕೆಟ್ ಉರುಳಿಸಿದ್ದು ಮೊದಲ ಇನಿಂಗ್ಸ್‌ನ ಹೈಲೈಟ್ ಆಗಿತ್ತು.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರ ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ 49.4 ಓವರ್‌ಗಳಲ್ಲಿ 241 ರನ್‌ಗೆ ಸರ್ವಪತನ ಕಂಡಿತು.