ಬೆಂಗಳೂರು : ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಬಿ ಖಾತ ಹೊಂದಿರೋ ಅಪಾರ್ಟ್‌ಮೆಂಟ್‌ಗಳಿಗೆ ಎ ಖಾತ ನೀಡಲು ಸರ್ಕಾರ ನಿರ್ಧರಿಸಿದೆ. ನಗರದಲ್ಲಿ 10 ಲಕ್ಷಕ್ಕೂ ಅಧಿಕ ಅಪಾರ್ಟ್ಮೆಂಟ್‌ಗಳಿವೆ ಅದರಲ್ಲಿ ಶೇ.90% ರಷ್ಟು ಅಪಾರ್ಟ್‌ಮೆಂಟ್‌ಗಳಿಗೆ ಬಿ ಖಾತ ಇದೆ. ಈಗ ಇಂತಹ ಅಪಾರ್ಟ್‌ಮೆಂಟ್‌ಗಳಿಗೆ ಎ ಖಾತ ಭಾಗ್ಯ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಾಗಾದ್ರೆ ಯಾವೆಲ್ಲಾ ಮಾನದಂಡಗಳು ಅನ್ವಯ?
– ಅಪಾರ್ಟ್‌ಮೆಂಟ್‌ನ ಈ ವರ್ಷದ ಅಸ್ತಿ ತೆರಿಗೆ ಪಾವತಿ ಮಾಡಿರಬೇಕು.
– ಅಪಾರ್ಟ್‌ಮೆಂಟ್‌ಗೆ ನಕ್ಷೆ ಇರಬೇಕು.
– ಸರ್ಕಾರ ಸೂಚಿಸಿದ ಮಾರ್ಗಸೂಚಿ ದರದ ಶೇಕಡಾ 5 ರಷ್ಟು ಹಣ ಪಾವತಿ ಮಾಡಬೇಕು.
– ಅಪಾರ್ಟ್‌ಮೆಂಟ್ ಲ್ಯಾಂಡ್‌ಗೆ ಬಿ ಖಾತ ಇರಬೇಕು.
– ಅಪಾರ್ಟಮೆಂಟ್ ಮಾಲೀಕರು ಇಂಡಿವಿಜಲಾಗಿ ಇ ಖಾತಗೆ ಅಪ್ಲೈ ಮಾಡಬೇಕು.
– ನಕ್ಷೆ ಮೀರಿ ಕಟ್ಟಡ ನಿರ್ಮಾಣ ಮಾಡಿದ್ರೆ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಣ ಪಾವತಿ ಮಾಡಬೇಕು.
– ಆನ್‌ಲೈನ್ ಮುಖಾಂತರ ಇ ಖಾತಗೆ ಅಪ್ಲೈ ಮಾಡಬಹುದು.
– ಅಪ್ಲೈ ಮಾಡಿದ ದಾಖಲೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಖಾತ ವಿತರಣೆ.
ಇದನ್ನೂ ಓದಿ : ರಾಜ್ಯದ ಎಲ್ಲಾ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ | ಕ್ಯಾಬಿನೆಟ್‌ನಲ್ಲಿ ಮಹತ್ವದ ನಿರ್ಧಾರ!



















