ಉತ್ತರ ಪ್ರದೇಶ :ಇದು ಅಸಂಖ್ಯ ಭಕ್ತರ ಹರಕೆ ಪೂರ್ಣಗೊಂಡ ದಿನ. ಶ್ರೀರಾಮಜನ್ಮಭೂಮಿಯಲ್ಲಿ ಇವತ್ತು ಗತವೈಭವ ಮರುಕಳುಹಿಸುವ ದಿನ.. ಅಯೋಧ್ಯೆಯಲ್ಲಿ ಇಂದು ಧರ್ಮಧ್ವಜ ರಾರಾಜಿಸಲಿದೆ.

ಈಗಾಗಲೇ ಅದ್ಧೂರಿ ‘ಧರ್ಮಧ್ವಜ’ ಸಮಾರಂಭಕ್ಕೆ ಅಯೋಧ್ಯೆ ಸಜ್ಜಾಗಿದೆ. ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಸಂಕೇತವಾಗಿ ಧರ್ಮ ಧ್ವಜ ಸ್ಥಾಪನೆಯಾಗಲಿದೆ. ನರೇಂದ್ರ ಮೋದಿಯವರು ಧರ್ಮ ಧ್ವಜವನ್ನು ಉದ್ಘಾಟಿಸಲಿದ್ದಾರೆ.
ಭಗವಾ ಧ್ವಜ ಮಹೋತ್ಸವ ವೀಕ್ಷಿಸಲು ದೇಶದ ವಿವಿಧೆಡೆಯಿಂದ ಭಕ್ತರ ದಂಡು ಅಯೋಧ್ಯಗೆ ಹರಿದು ಬರುತ್ತಿದೆ. ಮಧ್ಯಾಹ್ನ 12ಕ್ಕೆ ಪಿಎಂ ಮೋದಿಯಿಂದ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಮಾತಾ ಅನ್ನಪೂರ್ಣ ಮಂದಿರ, ಸಪ್ತ ಮಂದಿರಕ್ಕೆ ಮೋದಿ ಭೇಟಿ ಮಾಡಲಿದ್ದಾರೆ.
ರಾಮಮಂದಿರದ ಕೇಸರಿ ಧ್ವಜದ ವಿಶೇಷತೆಗಳೇನು?
ಕೇಸರಿ ಧ್ವಜವು 10 ಅಡಿ ಎತ್ತರ ಮತ್ತು 20 ಅಡಿ ಉದ್ದ ತ್ರಿಕೋನಾಕಾರದಲ್ಲಿ ಇದೆ. 360 ಡಿಗ್ರಿ ಆಕಾರದಲ್ಲಿ ಧ್ವಜಸ್ತಂಭ ತಿರುಗುತ್ತದೆ. ಧ್ವಜದ ಮೇಲೆ ಪ್ರಕಾಶಮಾನವಾದ ಸೂರ್ಯನ ಚಿತ್ರವಿದ್ದು, ‘ಓಂ’ ಚಿಹ್ನೆ ಮತ್ತು ಕುವಿದಾರ ವೃಕ್ಷ ಕೆತ್ತನೆ ಮಾಡಲಾಗಿದೆ. ಈ ಧ್ವಜವು ಘನತೆ, ಏಕತೆ, ಸಾಂಸ್ಕೃತಿಕ ಸಂದೇಶವನ್ನು ಸಾರುತ್ತದೆ ಹಾಗೂ ರಾಮರಾಜ್ಯದ ಆದರ್ಶಗಳನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ : ಸಹಾಯ ಮಾಡಿದ ಯುವತಿಗೆ ಮೈ, ಕೈ ಮುಟ್ಟಿ ಅಸಭ್ಯ ವರ್ತನೆ | ಕಾಮುಕನ ವಿಡಿಯೋ ವೈರಲ್



















